ಸೌವಾರ್ತಿಕ ಕೆಲಸಕ್ಕೆ ಸಾಮಾನ್ಯ ಅಡೆತಡೆಗಳು ಮತ್ತು ಅವುಗಳನ್ನು ನಿವಾರಿಸುವುದು ಹೇಗೆ—ಭಾಗ 1

(English Version: “Common Barriers To Evangelism & How To Overcome Them – Part 1”)
ಕರ್ತನಾದ ಯೇಸು ಕ್ರಿಸ್ತನು ಪರಲೋಕಕ್ಕೆ ಹೋಗುವಾಗ ಆತನು ಹೇಳಿದ ಕೊನೆಯ ಮಾತುಗಳು ನಮಗೆ ಮಹಾ ಆಜ್ಞೆ ಎಂದು ಕರೆಯಲ್ಪಡುತ್ತದೆ, “18 ಆಗ ಯೇಸು ಹತ್ತರಕ್ಕೆ ಬಂದು “ಪರಲೋಕದಲ್ಲಿಯೂ ಭೂಲೋಕದಲ್ಲಿಯೂ ಎಲ್ಲಾ ಅಧಿಕಾರವು ನನಗೆ ಕೊಡಲ್ಪಟ್ಟಿದೆ. 19ಆದ್ದರಿಂದ ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; ಅವರಿಗೆ ತಂದೆಯ, ಮಗನ, ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನಮಾಡಿಸಿ 20ನಾನು ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳುವದಕ್ಕೆ ಅವರಿಗೆ ಉಪದೇಶ ಮಾಡಿರಿ. ನೋಡಿರಿ, ನಾನು ಯುಗದ ಸಮಾಪ್ತಿಯವರೆಗೂ ಎಲ್ಲಾ ದಿವಸ ನಿಮ್ಮ ಸಂಗಡ ಇರುತ್ತೇನೆ ಎಂದು ಹೇಳಿದನು”” [ಮತ್ತಾಯ 28:18-20].
ಈ ಮಹಾ ಆಜ್ಞೆಯ ಕುರಿತಾದ ಯೇಸುವಿನ ಮಾತುಗಳ ಲೂಕನು ಬರೆದಿದ್ದು ಇಲ್ಲಿದೆ: “ಕ್ರಿಸ್ತನು ಶ್ರಮೆಪಟ್ಟು ಸತ್ತು ಮೂರನೆಯ ದಿನದಲ್ಲಿ ಜೀವಿತನಾಗಿ ಎದ್ದುಬರುವನೆಂತಲೂ 47ಪಾಪಪರಿಹಾರಕ್ಕೋಸ್ಕರ ದೇವರ ಕಡೆಗೆ ತಿರುಗಿಕೊಳ್ಳಬೇಕೆಂಬ ಮಾತು ಯೆರೂಸಲೇಮು ಮೊದಲುಗೊಂಡು ಸಮಸ್ತ ದೇಶದವರಿಗೂ ಆತನ ಹೆಸರಿನಲ್ಲಿ ಸಾರಲ್ಪಡುವದೆಂತಲೂ ಬರೆದದೆ. 48 ಇವುಗಳಿಗೆ ನೀವು ಸಾಕ್ಷಿಗಳಾಗಿದ್ದೀರಿ” [ಲೂಕ 24:46-48].
ಮತ್ತು, ಲೂಕನು ಅ. ಕೃತ್ಯಗಳು 1:8ರಲ್ಲಿ ಮಹಾ ಆಜ್ಞೆಯ ಹೆಚ್ಚುವರಿ ದಾಖಲೆಯನ್ನು ಕೊಡುತ್ತಾನೆ. ಆದರೆ ಈ ಬಾರಿ, ಪವಿತ್ರಾತ್ಮನು ನಮ್ಮನ್ನು ಸುವಾರ್ತೆಗಾಗಿ ಸಶಕ್ತಗೊಳಿಸುವ ಕುರಿತು ಯೇಸುವಿನ ಮಾತುಗಳು ನಮ್ಮಲ್ಲಿವೆ: “ಆದರೆ ಪವಿತ್ರಾತ್ಮ ನಿಮ್ಮ ಮೇಲೆ ಬರಲು ನೀವು ಬಲವನ್ನು ಹೊಂದಿ ಯೆರೂಸಲೇವಿುನಲ್ಲಿಯೂ ಎಲ್ಲಾ ಯೂದಾಯ ಸಮಾರ್ಯ ಸೀಮೆಗಳಲ್ಲಿಯೂ ಭೂಲೋಕದ ಕಟ್ಟಕಡೆಯವರೆಗೂ ನನಗೆ ಸಾಕ್ಷಿಗಳಾಗಿರಬೇಕು ಅಂದನು.”
ಕೇವಲ ಮಾನವರ ಕೊನೆಯ ಮಾತುಗಳಿಗೆ ನಾವು ಪ್ರಾಮುಖ್ಯವನ್ನು ನೀಡುವುದಾದರೆ, ಈ ಜಗತ್ತನು, ರಾಜಾಧಿ ರಾಜನಾದ ಕರ್ತನೂ ಅರಸನೂ ದೇವರು ಆದ ಯೇಸು ಕ್ರಿಸ್ತನು ಭೂಮಿಯನ್ನು ತೊರೆಯುವಾಗ ಆತನ ಕೊನೆಯ ಮಾತುಗಳಿಗೆ ನಾವು ಎಷ್ಟು ಹೆಚ್ಚು ಪ್ರಾಮುಖ್ಯವನ್ನು ಕೊಡಬೇಕು? ತನ್ನ ಸಾಕ್ಷಿಗಳಾಗಿ ಈ ಲೋಕಕ್ಕೆ ಸುವಾರ್ತೆಯನ್ನು ಸಾರುವುದರ ಪ್ರಾಮುಖ್ಯದ ಕುರಿತು ಯೇಸುವಿನ ಮಾತುಗಳು ಸ್ಫಟಿಕವಾಗಿ ಸ್ಪಷ್ಟವಾಗಿಲ್ಲವೇ? ಆದರೂ, ನಂಬಿಗಸ್ತ ಸಾಕ್ಷಿಗಳಾಗುವ ನಾವು ಈ ಕೆಲಸದಲ್ಲಿ ಎಷ್ಟು ಬಾರಿ ವಿಫಲರಾಗುತ್ತೇವೆ! ಈ ಆಜ್ಞೆಯಲ್ಲಿ ಅವಿಧೇಯತೆಯೆಂಬ ಭಾರವಾದ ಅಪರಾಧವನ್ನು ನಾವು ಎಷ್ಟು ಬಾರಿ ಹೊರುತ್ತೇವೆ!
ಈ ಪತ್ರಿಕೆ ಮತ್ತು ಮುಂದಿನ ಪತ್ರಿಕೆಯಲ್ಲಿ, ನಂಬಿಗಸ್ತ ಸುವಾರ್ತಾ ಪ್ರಚಾರಕ್ಕೆ ಕೆಲವು ಸಾಮಾನ್ಯ ಅಡೆತಡೆಗಳನ್ನು ಅಥವಾ ಕೆಲವು ಸಂದರ್ಭಗಳಲ್ಲಿ ನಾವು “ನೆಪಗಳನ್ನು” ಹೇಳಬೇಕೇ ಎಂದು ನೋಡಲು ಪವಿತ್ರಾತ್ಮನು ನಮಗೆ ಸಹಾಯ ಮಾಡುತ್ತಾನೆ ಎಂದು ಆಶಿಸುತ್ತೇವೆ. ಮತ್ತು ಈ ಅಡೆತಡೆಗಳನ್ನು ನಿವಾರಿಸಲು ಆತನ ಮೇಲೆ ನಂಬಿಕೆಯ ಮೂಲಕ ನಮ್ಮ ಮಾರ್ಗಗಳನ್ನು ಬದಲಾಯಿಸಲು ಆತನು ನಮ್ಮನ್ನು ಪ್ರೇರೇಪಿಸುತ್ತಾನೆ ಎಂದು ನಾನು ಪ್ರಾರ್ಥಿಸುತ್ತೇನೆ. ಈ ರೀತಿಯಲ್ಲಿ, ನಾವು ಯೇಸು ಕ್ರಿಸ್ತನ ನಂಬಿಗಸ್ತ ಸಾಕ್ಷಿಗಳಾಗಿರಲು ನಮ್ಮ ಕರೆಯನ್ನು ಪೂರೈಸಲು ಸಾಧ್ಯವಿದೆ.
ಆದಾಗ್ಯೂ, ಈ ಸಾಮಾನ್ಯ ಅಡೆತಡೆಗಳನ್ನು ನೋಡುವ ಮೊದಲು, ನಾವು ಸುವಾರ್ತೆಯ ಒಂದು ಸರಳ ವ್ಯಾಖ್ಯಾನವನ್ನು ನೋಡೋಣ: ಸುವಾರ್ತೆ ಸಾರುವುದು ಎಂದರೆ ನಮ್ಮ ಪಾಪಗಳಿಗಾಗಿ ಸತ್ತು ಮತ್ತೆ ಮೂರನೆಯ ದಿನ ಎದ್ದು ಬಂದ ಯೇಸು ಕ್ರಿಸ್ತನ ಕುರಿತಾದ ಸುವಾರ್ತೆಯನ್ನು ಪ್ರೀತಿಯಿಂದ ಮತ್ತು ನಂಬಿಕೆಯಿಂದ ಸಾರುವಂತಹದಾಗಿದೆ, ಇದರಿಂದ ಪಶ್ಚಾತ್ತಾಪಟ್ಟು ಅತನಲ್ಲಿ ಮಾತ್ರ ಭರವಸೆ ಇಡುವ ಮೂಲಕ ಜನರು ತಮ್ಮ ಪಾಪಗಳಿಂದ ಕ್ಷಮಿಸಲ್ಪಡಬಹುದು.
ಆದ್ದರಿಂದ, ಈ ವ್ಯಾಖ್ಯಾನವನ್ನು ನಮ್ಮ ಮನಸ್ಸಿನ ಹಿಂಭಾಗದಲ್ಲಿಟ್ಟುಕೊಂಡು, ಮುಂದೆ ಓದೋಣ.
1. ನಾನು ವ್ಯಕ್ತಿಯನ್ನು ನೋಯಿಸುತ್ತೇನೆ ಮತ್ತು ಇದರ ಪರಿಣಾಮವಾಗಿ ಆ ಸಂಬಂಧವನ್ನು ಕಳೆದುಕೊಳ್ಳುತ್ತೇನೆ ಎಂದು ನಾನು ಹೆದರುತ್ತೇನೆ.
ಸುವಾರ್ತೆಯ ಸಂದೇಶವು ದೇವರೊಂದಿಗೆ ವೈರತ್ವದಲ್ಲಿರುವವರಿಗೆ [ಅನ್ಯಜನರಿಗೆ] ಆಕ್ರಮಣಕಾರಿಯಾಗಿದೆ. ಆದಾಗ್ಯೂ, ನಾವು ಇನ್ನೂ ಪ್ರೀತಿಯಲ್ಲಿ ಸತ್ಯವನ್ನು ಪ್ರಸ್ತುತಪಡಿಸಲು ಪ್ರಯತ್ನಿಸಬೇಕು ಮತ್ತು ಸಂಬಂಧಗಳ ನಷ್ಟಕ್ಕೆ ಹೆದರಬಾರದು. ದೇವರು ನಮಗೆ ಸಂಬಂಧವನ್ನು ನೀಡುತ್ತಾನೆ! ಅದಕ್ಕಾಗಿಯೇ, ದೇವರೊಂದಿಗಿನ ನಮ್ಮ ಸಂಬಂಧಕ್ಕಿಂತ ಜನರೊಂದಿಗಿನ ನಮ್ಮ ಸಂಬಂಧಗಳಿಗೆ ಹೆಚ್ಚಿನ ಸ್ಥಾನವನ್ನು ನೀಡದಂತೆ ನಾವು ನಮ್ಮನ್ನು ರಕ್ಷಿಸಿಕೊಳ್ಳಬೇಕಾಗಿದೆ.
ಮತ್ತಾಯ 10:37 “ತಂದೆಯ ಮೇಲಾಗಲಿ ತಾಯಿಯ ಮೇಲಾಗಲಿ ನನ್ನ ಮೇಲೆ ಇಡುವದಕ್ಕಿಂತ ಹೆಚ್ಚಾದ ಮಮತೆಯನ್ನಿಡುವವನು ನನಗೆ ಯೋಗ್ಯನಲ್ಲ.”
2. ನನ್ನ ಸ್ವಂತ ಕೆಲಸದ ಬಗ್ಗೆ ಗಮನ ಹರಿಸುವಂತೆ ಅವರು ನನಗೆ ಹೇಳಬಹುದು.
ಇತರರ ಆತ್ಮಿಕ ಜೀವಿತದ ಸ್ಥಿತಿಯನ್ನು ಕುರಿತು ಯೋಚಿಸುವುದು ಕ್ರೈಸ್ತನ ಕೆಲಸವಾಗಿದೆ. ನಮ್ಮ ಆತ್ಮಿಕ ಜೀವಿತದ ಸ್ಥಿತಿಯನ್ನು ಅವರ ಕೆಲಸವಲ್ಲ ಎಂದು ಯಾರಾದರೂ ಭಾವಿಸಿದ್ದರೆ ನಾವು ಎಲ್ಲಿ ಇರುತ್ತಿದ್ದೆವು ಎಂಬುದರ ಕುರಿತು ಯೋಚಿಸೋಣ! [ಅಂದರೆ ನಮ್ಮನ್ನು ದೇವರ ಕಡೆಗೆ ನಡಸಿದವರು ನಮ್ಮನ್ನು ದೇವರಲ್ಲಿ ಬೆಳಿಯೋದಿಕ್ಕೆ ಸಹಾಯ ಮಾಡದಿದ್ದಲ್ಲಿ ನಾವು ನಾವಾಗಿ ನಿಂತುಕೊಳ್ಳೋಕೆ ಸಾಧ್ಯವಾಗುತ್ತಿರಲಿಲ್ಲ]
ಡಿ.ಎಲ್. ಮೂಡಿ ಒಮ್ಮೆ, ಚಿಕಾಗೋದ ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಒಬ್ಬ ಅಪರಿಚಿತನಾದ ವ್ಯಕ್ತಿಯ ಇವನ ಬಳಿಗೆ ಬಂದು, “ಸರ್, ನೀವು ಕ್ರಿಶ್ಚಿಯನ್ ಆಗಿದ್ದೀರಾ?” ಎಂದು ಕೇಳಿದರು. “ನೀವು ನಿಮ್ಮ ಸ್ವಂತ ಕೆಲಸದ ಬಗ್ಗೆ ತಲೆಕೆಡಿಸಿಕೊಳ್ಳಿರಿ.” “ಸರ್, ಇದು ನನ್ನ ಕೆಲಸ” ಎಂದು ಮೂಡಿ ತಕ್ಷಣ ಉತ್ತರಿಸಿದರು.
2 ಕೊರಿಂಥ 5:20 “ನಾವು ಕ್ರಿಸ್ತನ ರಾಯಭಾರಿಗಳಾಗಿದ್ದೇವೆ. ದೇವರೇ ನಮ್ಮ ಮೂಲಕ ಬುದ್ಧಿ ಹೇಳುವ ಹಾಗಾಯಿತು. ದೇವರೊಂದಿಗೆ ಸಮಾಧಾನವಾಗಿರೆಂದು ಕ್ರಿಸ್ತನ ಹೆಸರಿನಲ್ಲಿ ನಿಮ್ಮನ್ನು ಬೇಡಿಕೊಳ್ಳುತ್ತೇವೆ.”
3. ಎಲ್ಲಿಂದ ಪ್ರಾರಂಭಿಸಬೇಕೆಂದು ನನಗೆ ತಿಳಿದಿಲ್ಲ.
ಯೇಸು ನಮಗಾಗಿ ಏನು ಮಾಡಿದನೋ ಅದನ್ನು ನಾವು ಯಾವಾಗಲೂ ನಮ್ಮ ಸ್ವಂತ ಸಾಕ್ಷ್ಯದಿಂದ ಪ್ರಾರಂಭಿಸಬಹುದು. ಅದನ್ನೇ ಯೇಸು ಗೆರಸೇನ ಸೀಮೆಯಲ್ಲಿ ದೆವ್ವಗಳಿಂದ ಬಿಡುಗಡೆಯಾದ ಆ ಮನುಷ್ಯನನ್ನು ಆಜ್ಞಾಪಿಸಿದನು.
ಲೂಕ 8:39 “ಆತನು—ನೀನು ನಿನ್ನ ಮನೆಗೆ ಹಿಂತಿರುಗಿ ಹೋಗಿ ದೇವರು ನಿನಗೆ ಎಂಥೆಂಥ ಉಪಕಾರಗಳನ್ನು ಮಾಡಿದನೋ ಅದನ್ನೆಲ್ಲಾ ವಿವರವಾಗಿ ಹೇಳು ಎಂದು ಅವನನ್ನು ಕಳುಹಿಸಿಬಿಟ್ಟನು. ಅವನು ಹೊರಟುಹೋಗಿ ಯೇಸು ತನಗೆ ಮಾಡಿದ ಉಪಕಾರಗಳನ್ನು ಆ ಊರಲ್ಲೆಲ್ಲಾ ಸಾರಿದನು.”
ಇದೆ ರೀತಿಯಾಗಿ ನಮ್ಮ ಸಾಕ್ಷಿ ಜೀವಿತವು ವೈಯಕ್ತಿಕವಾಗಿವೆ, ಮತ್ತು ಯಾರೂ ಅವುಗಳನ್ನು ನಿರಾಕರಿಸಲು ಸಾಧ್ಯವಿಲ್ಲ. ಮತ್ತು ಆತ್ಮವು ಹಾಗೆ ಮಾಡಲು ಆಯ್ಕೆಮಾಡಿದರೆ ಅದು ಸಾಕಷ್ಟು ಪ್ರಭಾವವನ್ನು ಬೀರಬಲ್ಲದು!
4. ನಾನು ಇನ್ನೂ ಬೈಬಲನ್ನು ಕಲಿಯುತ್ತಿದ್ದೇನೆ. ಜನರು ಕೇಳಬಹುದಾದ ಪ್ರಶ್ನೆಗಳಿಗೆ ನನ್ನ ಬಳಿ ಎಲ್ಲಾ ಉತ್ತರಗಳಿಲ್ಲ.
ಗೆರಸೇನ ಸೀಮೆಯ ದೆವ್ವಗಳಿಂದ ಬಿಡುಗಡೆಯಾದ ಆ ಮನುಷ್ಯನಿಗೆ ಬೈಬಲಿನ ಬಗ್ಗೆ ಹೆಚ್ಚು ತಿಳಿದಿರಲಿಲ್ಲ [ಲೂಕ 8:26-39]. ಆದರೂ, ಅವನು ಬದಲಾದ ಕೂಡಲೇ ಸಾಕ್ಷಿಹೇಳಲಾರಂಭಿಸಿದನು [ಲೂಕ 8:39]. ಅವಿಶ್ವಾಸಿಯು ಕೇಳಬಹುದಾದ ಎಲ್ಲಾ ಉತ್ತರಗಳನ್ನು ನಾವು ಎಂದಿಗೂ ಹೊಂದಿರುವುದಿಲ್ಲ. ಆದರೆ ಅದು ನಮ್ಮನ್ನು ಸಾಕ್ಷಿಹೇಳದಂತೆ ತಡೆಯಬಾರದು. “ನನಗೆ ಉತ್ತರ ಗೊತ್ತಿಲ್ಲ, ಆದರೆ ನಾನು ಅದನ್ನು ತಿಳಿದುಕೊಂಡು ನಿಮ್ಮ ಬಳಿಗೆ ಹಿಂತಿರುಗುತ್ತೇನೆ ಎಂದು ಹೇಳುವುದು ಸರಿ.” ಆತ್ಮಿಕ ಸಹಾಯ ಮಾಡಬಲ್ಲ ಯಾರನ್ನಾದರೂ ಸಂಪರ್ಕಿಸಿ ಮತ್ತು ಆ ವ್ಯಕ್ತಿಯ ಬಳಿಗೆ ಹಿಂತಿರುಗಿ, ಮತ್ತು ನಿಮ್ಮ ಬಳಿ ಇನ್ನೂ ಉತ್ತರವಿಲ್ಲದಿದ್ದರೆ, “ನನಗೆ ಗೊತ್ತಿಲ್ಲ!” ಹೇಳುವುದು ಸರಿ. ಸುವಾರ್ತೆ ಸಾರುವುದು ಎಂದರೆ ಎಲ್ಲಾ ಉತ್ತರಗಳನ್ನು ಹೊಂದುವುದರ ಬಗ್ಗೆ ಅಲ್ಲ!
ಹಡ್ಸನ್ ಟೇಲರ್, ಒಬ್ಬ ಚೀನಾದ ಪಾಸ್ಟರ್ ಬಗ್ಗೆ ಹೇಳಿದನು, ಅವನು ಯಾವಾಗಲೂ ಹೊಸದಾಗಿ ರಕ್ಷಣೆ ಹೊಂದಿದವರಿಗೆ ಸಾಧ್ಯವಾದಷ್ಟು ಬೇಗ ಸಾಕ್ಷಿಹೇಳುವಂತೆ ಯಾವಾಗಲೂ ಸೂಚನೆ ನೀಡುತ್ತಿದ್ದನು. ಒಮ್ಮೆ, ರಕ್ಷಣೆ ಹೊಂದಿದ ಒಬ್ಬ ಯುವಕನನ್ನು ಭೇಟಿಯಾದಾಗ, ಪಾಸ್ಟರ್ ಕೇಳಿದನು, “ಸಹೋದರ, ನೀವು ಎಷ್ಟು ಸಮಯದಿಂದ ರಕ್ಷಣೆ ಹೊಂದಿದ್ದಿಯಾ.” ತಾನು ರಕ್ಷಣೆ ಹೊಂದಿ ಸುಮಾರು ಮೂರು ತಿಂಗಳಾಗಿದೆ ಎಂದು ಆ ವ್ಯಕ್ತಿ ಉತ್ತರಿಸಿದನು. “ಮತ್ತು ನೀವು ಎಷ್ಟು ಮಂದಿಗೆ ಸುವಾರ್ತೆಯನ್ನು ಸಾರಿ ರಕ್ಷಣೆ ದಾರಿಯಲ್ಲಿ ನಡೆಸಿದ್ದಿರಿ?” ಹಡ್ಸನ್ ಕೇಳಿದರು.
“ಓಹ್, ನಾನು ಕೇವಲ ಕಲಿಯುವವನು” ಎಂದು ರಕ್ಷಣೆಹೊಂದಿದವನು ಪ್ರತಿಕ್ರಿಯಿಸಿದನು. ಅಸಮ್ಮತಿಯಿಂದ ತಲೆ ಅಲ್ಲಾಡಿಸುತ್ತಾ ಪಾಸ್ಟರ್ ಹೇಳಿದರು, “ಯುವಕನೇ, ನೀನು ಪೂರ್ಣಪ್ರಮಾಣದ ಬೋಧಕನಾಗಬೇಕೆಂದು ಕರ್ತನು ನಿರೀಕ್ಷಿಸುವುದಿಲ್ಲ, ಆದರೆ ನೀನು ನಂಬಿಗಸ್ತ ಸಾಕ್ಷಿಯಾಗಬೇಕೆಂದು ಆತನು ನಿರೀಕ್ಷಿಸುತ್ತಾನೆ. ನನಗೆ ಹೇಳು, ಮೇಣದ ಬತ್ತಿಯು ಯಾವಾಗ ಹೊಳೆಯಲು ಪ್ರಾರಂಭಿಸುತ್ತದೆ, ಅರ್ಧದಷ್ಟು ಸುಟ್ಟುಹೋದಮೇಲೆ?” “ಇಲ್ಲ, ಅದು ಬೆಳಗಿದ ಕೂಡಲೇ” ಎಂದು ಉತ್ತರ ಹೇಳಿದನು. “ಅದು ಸರಿ. ನಿನ್ನ ಬೆಳಕನ್ನು ಈಗಿನಿಂದಲೇ ಬೆಳಗಲು ಬಿಡು.”
5. ನಾನು ಸೌವಾರ್ತಿಕ ಸೇವೆಯಲ್ಲಿ ಹೆಚ್ಚು ಸೃಜನಶೀಲ ವಿಧಾನಗಳನ್ನು ಕಲಿಯಬೇಕಾಗಿದೆ. ನಂತರ ನಾನು ಸುವಾರ್ತೆಯನ್ನು ಸಾರುವೆನು.
ಹೌದು, ನಮ್ಮ ಸುವಾರ್ತೆಯಲ್ಲಿ ಸುಧಾರಣೆಗೆ ಯಾವಾಗಲೂ ಅವಕಾಶವಿದೆ. ಆದಾಗ್ಯೂ, ಸುವಾರ್ತೆಯ ಕುರಿತು ನಮಗೆ ತಿಳಿದಿರುವ ಅಲ್ಪಸ್ವಲ್ಪ ವಿಷಯಗಳಲ್ಲಿ ನಾವು ನಂಬಿಗಸ್ತರಾಗಿರದಿದ್ದರೆ, ನಾವು ಹೆಚ್ಚಿನ ವಿಧಾನಗಳನ್ನು ಕಲಿತರೆ ನಾವು ನಂಬಿಗಸ್ತರಾಗಿರುತ್ತೇವೆಯೇ?
ಲೂಕ 16:10 “ಸ್ವಲ್ಪವಾದದ್ದರಲ್ಲಿ ನಂಬಿಗಸ್ತನಾದವನು ಬಹಳವಾದದ್ದರಲ್ಲಿಯೂ ನಂಬಿಗಸ್ತನಾಗುವನು; ಸ್ವಲ್ಪವಾದದ್ದರಲ್ಲಿ ಅನ್ಯಾಯಗಾರನಾದವನು ಬಹಳವಾದದ್ದರಲ್ಲಿಯೂ.”
ಮೇಲಿನ ವಾಕ್ಯದ ತಕ್ಷಣದ ಅನ್ವಯವು ಹಣದ ಉಸ್ತುವಾರಿಗೆ ಸಂಬಂಧಿಸಿರಬಹುದಾದರೂ, ವಿಸ್ತೃತ ಅನ್ವಯಗಳಲ್ಲಿ ಒಂದು ಸುವಾರ್ತೆಗೂ ಅನ್ವಯಿಸಬಹುದು.
6. ನಾನು ಹುಚ್ಚ ಮತ್ತು ಧಾರ್ಮಿಕ ಮತಾಂಧ ಎಂದು ಅವರು ಭಾವಿಸುತ್ತಾರೆ.
ಕ್ರ್ಯಸ್ತರು ಈ ಪ್ರಪಂಚಕ್ಕೆ ಸೇರಿದವರಲ್ಲ, ಆದರೆ ಬೇರೆ ಜಗತ್ತಿಗೆ ಸೇರಿದವನು. ಆದುದರಿಂದ, ಈ ಲೋಕದ ಜನರು ಕ್ರೈಸ್ತರನ್ನು “ಭಿನ್ನರು [ಪ್ರತ್ಯೇಕರು]” ಎಂದು ಭಾವಿಸುವುದು ಸ್ವಾಭಾವಿಕವಾಗಿದೆ. ನೆನಪಿಡಿ, ನಮ್ಮ ಕ್ರೈಸ್ತಪೂರ್ವ ಜೀವನದಲ್ಲಿ, ಕ್ರೈಸ್ತರು ಹುಚ್ಚರು ಎಂದು ನಾವು ಸಹ ಭಾವಿಸಿದ್ದೆವು!
1 ಕೊರಿಂಥ 1:18 “ಶಿಲುಬೆಯ ವಿಷಯವಾದ ಮಾತು ನಾಶನದ ಮಾರ್ಗದಲ್ಲಿರುವವರಿಗೆ ಹುಚ್ಚುಮಾತಾಗಿದೆ, ರಕ್ಷಣೆಯ ಮಾರ್ಗದಲ್ಲಿರುವ ನಮಗಾದರೋ ದೇವರ ಶಕ್ತಿಯಾಗಿದೆ.”
1 ಕೊರಿಂಥ 4:10 “ನಾವಂತು ಕ್ರಿಸ್ತನ ನಿವಿುತ್ತ ಹುಚ್ಚರಾಗಿದ್ದೇವೆ.”
7. ಸೌವಾರ್ತಿಕ ಕೆಲಸ ಎಂಬುದು ಚರ್ಚಿನ [ಸಭೆಯ] ನಾಯಕರ ಜವಾಬ್ದಾರಿಯಾಗಿದೆ.
ಅವಿಶ್ವಾಸಿಗಳನ್ನು ಚರ್ಚ್ ಸೇವೆಗೆ ಆಹ್ವಾನಿಸುವುದು ಅಥವಾ ಸುವಾರ್ತೆಯನ್ನು ಕೇಳಲು ವಿಶೇಷ ಸೌವಾರ್ತಿಕ ಪ್ರಚಾರವು ಸುವಾರ್ತೆಯ ಒಂದು ವಿಧಾನವಾಗಿದ್ದರೂ, ಇದು ವೈಯಕ್ತಿಕ ಮುಖಾಮುಖಿ ಸಾಕ್ಷಿಗೆ ಬದಲಿಯಲ್ಲ. ಕರ್ತನು ತನ್ನ ಪ್ರತಿಯೊಬ್ಬ ಅನುಯಾಯಿಗೆ ಸುವಾರ್ತೆಯನ್ನು ಸಾರಲು ಬಾಯಿ ತೆರೆಯುವಂತೆ ಆಜ್ಞಾಪಿಸುತ್ತಾನೆ. ಮತ್ತು ಇದು ಆರಂಭಿಕ ವಿಶ್ವಾಸಿಗಳ ಮಾದರಿಯಾಗಿತ್ತು.
ಅ. ಕೃತ್ಯಗಳು 8:4 “ಚದರಿಹೋದವರು ಅಲ್ಲಲ್ಲಿ ಹೋಗಿ ಸುವಾರ್ತಾವಾಕ್ಯವನ್ನು ಸಾರುತ್ತಿದ್ದರು.”
8. ನಾನು ಹೊರಗಿನ ಜನರೊಂದಿಗೆ ಸೇರುವವನಲ್ಲ. ಸ್ವಭಾವದಲ್ಲಿ, ನಾನು ತುಂಬಾ ನಾಚಿಕೆಪಡುತ್ತೇನೆ ಮತ್ತು ಜನರೊಂದಿಗೆ ಮಾತನಾಡಲು ಹೆದರುತ್ತೇನೆ.
ದೇವರು ನಮ್ಮಲ್ಲಿ ಭಯದ ಮನೋಭಾವವನ್ನು ತೆಗೆದುಹಾಕಿದ್ದಾನೆ ಮತ್ತು ಆತನ ಬಗ್ಗೆ ಮಾತನಾಡುವ ಶಕ್ತಿಯಿಂದ ನಮ್ಮನ್ನು ತುಂಬಿದ್ದಾನೆ.
ಅ. ಕೃತ್ಯಗಳು 1:8 “ಆದರೆ ಪವಿತ್ರಾತ್ಮ ನಿಮ್ಮ ಮೇಲೆ ಬರಲು ನೀವು ಬಲವನ್ನು ಹೊಂದಿ ಯೆರೂಸಲೇವಿುನಲ್ಲಿಯೂ ಎಲ್ಲಾ ಯೂದಾಯ ಸಮಾರ್ಯ ಸೀಮೆಗಳಲ್ಲಿಯೂ ಭೂಲೋಕದ ಕಟ್ಟಕಡೆಯವರೆಗೂ ನನಗೆ ಸಾಕ್ಷಿಗಳಾಗಿರಬೇಕು ಅಂದನು.”
2 ತಿಮೊಥೆಯ 1:7-8 “ದೇವರು ನಮಗೆ ಕೊಟ್ಟಿರುವ ಆತ್ಮವು ಬಲ ಪ್ರೀತಿ ಶಿಕ್ಷಣಗಳ ಆತ್ಮವೇ ಹೊರತು ಹೇಡಿತನದ ಆತ್ಮವಲ್ಲ. 8ಆದದರಿಂದ ನೀನು ನಮ್ಮ ಕರ್ತನನ್ನು ಕುರಿತು ಹೇಳುವ ಸಾಕ್ಷಿಯ ವಿಷಯದಲ್ಲಾಗಲಿ ಆತನ ಸೆರೆಯವನಾದ ನನ್ನ ವಿಷಯದಲ್ಲಾಗಲಿ ನಾಚಿಕೆಪಡದೆ ದೇವರ ಬಲವನ್ನು ಆಶ್ರಯಿಸಿ ನನ್ನೊಂದಿಗೆ ಸುವಾರ್ತೆಗೋಸ್ಕರ ಶ್ರಮೆಯನ್ನನುಭವಿಸು.”
9. ನಾನು ಆ ವ್ಯಕ್ತಿಯೊಂದಿಗೆ ಮಾತನಾಡುವ ಬದಲು ಅವರಿಗಾಗಿ ಪ್ರಾರ್ಥಿಸುತ್ತೇನೆ.
ಸುವಾರ್ತಾ ಪ್ರಚಾರಕ್ಕೆ ಪ್ರಾರ್ಥನೆ ಅತ್ಯಗತ್ಯವಾಗಿದ್ದರೂ, ಕರ್ತನು ನಮ್ಮ ಬಾಯಿಯನ್ನು ತೆರೆಯಲು ಮತ್ತು ಇತರರಿಗೆ ತನ್ನ ಬಗ್ಗೆ ಹೇಳಲುಆಜ್ಞಾಪಿಸುತ್ತಾನೆ.
ಲೂಕ 24:47 “ಪಾಪಪರಿಹಾರಕ್ಕೋಸ್ಕರ ದೇವರ ಕಡೆಗೆ ತಿರುಗಿಕೊಳ್ಳಬೇಕೆಂಬ ಮಾತು ಯೆರೂಸಲೇಮು ಮೊದಲುಗೊಂಡು ಸಮಸ್ತ ದೇಶದವರಿಗೂ ಆತನ ಹೆಸರಿನಲ್ಲಿ ಸಾರಲ್ಪಡುವದೆಂತಲೂ ಬರೆದದೆ.”
ಲೂಕ 8:39 “ನೀನು ನಿನ್ನ ಮನೆಗೆ ಹಿಂತಿರುಗಿ ಹೋಗಿ ದೇವರು ನಿನಗೆ ಎಂಥೆಂಥ ಉಪಕಾರಗಳನ್ನು ಮಾಡಿದನೋ ಅದನ್ನೆಲ್ಲಾ ವಿವರವಾಗಿ ಹೇಳು ಎಂದು ಅವನನ್ನು ಕಳುಹಿಸಿಬಿಟ್ಟನು. ಅವನು ಹೊರಟುಹೋಗಿ ಯೇಸು ತನಗೆ ಮಾಡಿದ ಉಪಕಾರಗಳನ್ನು ಆ ಊರಲ್ಲೆಲ್ಲಾ ಸಾರಿದನು.”
ಕತ್ತಲೆಯಲ್ಲಿ ಕಳೆದುಹೋದ ವ್ಯಕ್ತಿಯ ಬಗ್ಗೆ ನಾವು ದೇವರಿಗೆ ನಮ್ಮ ಬಾಯಿಯನ್ನು ತೆರೆಯಬೇಕಾಗಿದೆ. ಅದೇ ಪ್ರಾರ್ಥನೆ. ಆದರೆ ಅದೆ ವ್ಯಕ್ತಿಗೆ ನಾವು ದೇವರ ಸುವಾರ್ತೆ ಸಾರಲು ನಮ್ಮ ಬಾಯಿಯನ್ನು ತೆರೆಯಬೇಕಾಗಿದೆ. ಅದೇ ಸೌವಾರ್ತಿಕ ಸೇವೆ. ಇವೆರಡೂ ಇನ್ನೊಂದಕ್ಕೆ ಬದಲಿಯಲ್ಲ.
10. ಅವರು ತುಂಬಾ ಹಠಮಾರಿಗಳಂತೆ ಕಾಣುತ್ತಾರೆ. ಅವರು ಸುವಾರ್ತೆ ಸ್ವೀಕರಿಸುತ್ತಾರೆ ಎಂದು ನಾನು ಭಾವಿಸುವುದಿಲ್ಲ.
ಘೋಷಿತ ಸುವಾರ್ತೆಯ ಮೂಲಕ ದೇವರು ಕಠಿಣ ಹೃದಯಗಳನ್ನು ಮುರಿಯುವ ಮತ್ತು ಅವುಗಳನ್ನು ಮೃದು ಹೃದಯಗಳಿಂದ ಬದಲಾಯಿಸುವ ಕೆಲಸವನ್ನು ಮಾಡುತ್ತಾನೆ.
ಯೆರೆಮೀಯ 23:29 “ನನ್ನ ವಾಕ್ಯವು ಬೆಂಕಿಗೂ ಬಂಡೆಯನ್ನು ಒಡೆದುಬಿಡುವ ಚಮಟಿಗೆಗೂ ಸಮಾನವಾಗಿದೆಯಲ್ಲಾ?”
ಒಂದು ಉದಾಹರಣೆಯಾಗಿ ಅಪೊಸ್ತಲ ಪೌಲನನ್ನು ತೆಗೆದುಕೊಳ್ಳಿ. ಅವನು ಸುವಾರ್ತೆಯನ್ನು ವಿರೋಧಿಸಿದ್ದಲ್ಲದೆ, ಅವರ ನಂಬಿಕೆಗಾಗಿ ಅನೇಕ ಕ್ರೈಸ್ತರನ್ನು ಸಕ್ರಿಯವಾಗಿ ಕೊಂದನು. ಆದರೂ, ದೇವರು ಅವನನ್ನು ಬದಲಾಯಿಸಿದನು [1 ತಿಮೊಥೆಯ 1:12-16; ಅ. ಕೃತ್ಯಗಳು 26:9-18]! ದೇವರು ಏನು ಮಾಡಬಲ್ಲನೆಂಬುದನ್ನು ನಾವು ಎಂದಿಗೂ ಕಡೆಗಣಿಸಲಾರೆವು. ಸತ್ಯವನ್ನು ನಂಬಿಗಸ್ತಿಕೆಯಿಂದ ಪ್ರಸ್ತುತಪಡಿಸುವುದು ನಮ್ಮ ಭಾಗವಾಗಿದೆ. ಅದರ ಫಲಿತಾಂಶ ದೇವರ ಕೈಯಲ್ಲಿದೆ.
ಇವು— ಸುವಾರ್ತೆಗೆ ಬರುವ 10 ಸಾಮಾನ್ಯ ಅಡೆತಡೆಗಳು. ಮುಂದಿನ ಪತ್ರಿಕೆಯಲ್ಲಿ, ಸುವಾರ್ತೆಗೆ ಹೆಚ್ಚುವರಿ ಅಡೆತಡೆಗಳನ್ನು ನಾವು ನೋಡುತ್ತೇವೆ . ಈ ಮಧ್ಯೆ, ಈ ಅಡೆತಡೆಗಳನ್ನು ನಿವಾರಿಸಲು ಮತ್ತು ತನ್ನ ಸುವಾರ್ತೆಯನ್ನು ನಂಬಿಗಸ್ತಿಕೆಯಿಂದ ಸಾರಲು ಕರ್ತನು ನಮಗೆ ಸಹಾಯ ಮಾಡಲಿ!