ಪ್ರಾರ್ಥನೆಯ 12 ಪ್ರಯೋಜನಗಳು

(English Version: “12 Benefits of Prayer”)
1. ಪ್ರಾರ್ಥನೆಯು ದೇವರ ವಾಕ್ಯದ ತಿಳುವಳಿಕೆಯನ್ನು ಉತ್ತೇಜಿಸುತ್ತದೆ.
ಕೀರ್ತನೆಗಳು 119:18 “ನನ್ನ ಕಣ್ಣು ತೆರೆ; ಆಗ ನಿನ್ನ ಧರ್ಮಶಾಸ್ತ್ರದ ಅದ್ಭುತಗಳನ್ನು ಕಂಡುಕೊಳ್ಳುವೆನು.”
2. ಪ್ರಾರ್ಥನೆಯು ಪಾವಿತ್ರ್ಯತೆಯನ್ನು ಉತ್ತೇಜಿಸುತ್ತದೆ.
ಮತ್ತಾಯ 26:41 “ಶೋಧನೆಗೆ ಒಳಗಾಗದಂತೆ ಎಚ್ಚರವಾಗಿದ್ದು ಪ್ರಾರ್ಥಿಸಿರಿ; ಮನಸ್ಸು ಸಿದ್ಧವಾಗಿದೆ ಸರಿ, ಆದರೆ ದೇಹಕ್ಕೆ ಬಲ ಸಾಲದು ಎಂದು ಹೇಳಿದನು.”
3. ಪ್ರಾರ್ಥನೆಯು ನಮ್ರತೆಯನ್ನು [ದೀನತೆ] ಉತ್ತೇಜಿಸುತ್ತದೆ.
ಚೆಫನ್ಯ 2:3 “ಯೆಹೋವನ ನಿಯಮವನ್ನು ಕೈಕೊಂಡ ಲೋಕದ ದೀನರೇ, ನೀವೆಲ್ಲರೂ ಯೆಹೋವನನ್ನು ಆಶ್ರಯಿಸಿರಿ, ಸದ್ಧರ್ಮವನ್ನು ಅಭ್ಯಾಸಿಸಿರಿ, ದೈನ್ಯವನ್ನು ಹೊಂದಿಕೊಳ್ಳಿರಿ; ಯೆಹೋವನ ಸಿಟ್ಟಿನ ದಿನದಲ್ಲಿ ಒಂದು ವೇಳೆ ಮರೆಯಾಗುವಿರಿ.”
4. ಪ್ರಾರ್ಥನೆಯು ಸುವಾರ್ತಾ ಪ್ರಚಾರವನ್ನು ಉತ್ತೇಜಿಸುತ್ತದೆ
ಮತ್ತಾಯ 9:37-38 “ಆಗ ತನ್ನ ಶಿಷ್ಯರಿಗೆ – ಬೆಳೆಯು ಬಹಳ, ಕೆಲಸದವರು ಸ್ವಲ್ಪ; ಆದದರಿಂದ ಬೆಳೆಯ ಯಜಮಾನನನ್ನು – ನಿನ್ನ ಬೆಳೆಗೆ ಕೆಲಸದವರನ್ನು ಕಳುಹಿಸಬೇಕೆಂದು ಬೇಡಿಕೊಳ್ಳಿರಿ ಎಂದು ಹೇಳಿದನು.”
ಕೊಲೊಸ್ಸೆಯವರಿಗೆ 4:3 “ಇದಲ್ಲದೆ ನಮಗೋಸ್ಕರವೂ ಪ್ರಾರ್ಥನೆ ಮಾಡಿರಿ ಕ್ರಿಸ್ತನ ವಿಷಯದಲ್ಲಿ ದೇವರು ತಿಳಿಯಪಡಿಸಿದ ಸತ್ಯಾರ್ಥವನ್ನು ಪ್ರಸಂಗಿಸುವದಕ್ಕೆ ಆತನು ಅನುಕೂಲವಾದ ಸಂದರ್ಭವನ್ನು ನಮಗೆ ದಯಪಾಲಿಸಿ ನಾನು ಅದನ್ನು ಹೇಳಬೇಕಾದ ರೀತಿಯಲ್ಲಿ ತಳಿಸುವಂತೆ ಅನುಗ್ರಹಮಾಡಬೇಕೆಂದು ಬೇಡಿಕೊಳ್ಳಿರಿ.”
5. ಪ್ರಾರ್ಥನೆಯು ಮಿಷನ್ ಗಳನ್ನು [ಸೇವೆ] ಉತ್ತೇಜಿಸುತ್ತದೆ.
ಅಪೊಸ್ತಲರ ಕೃತ್ಯಗಳು 13:1-3 “1ಅಂತಿಯೋಕ್ಯದಲ್ಲಿದ್ದ ಸಭೆಯೊಳಗೆ ಪ್ರವಾದಿಗಳೂ ಬೋಧಕರೂ ಇದ್ದರು; ಯಾರಾರಂದರೆ – ಬಾರ್ನಬ, ನೀಗರನೆಂಬ ಸಿಮೆಯೋನ, ಕುರೇನ್ಯದ ಲೂಕ್ಯ, ಉಪರಾಜನಾದ ಹೆರೋದನ ಸಾಕತಮ್ಮನಾದ ಮೆನಹೇನ, ಸೌಲ ಇವರೇ. 2ಇವರು ಕರ್ತನನ್ನು ಸೇವಿಸುತ್ತಾ ಉಪವಾಸ ಮಾಡುತ್ತಾ ಇದ್ದಾಗ ಪವಿತ್ರಾತ್ಮನು – ನಾನು ಬಾರ್ನಬ ಸೌಲರನ್ನು ಕರೆದ ಕೆಲಸಕ್ಕಾಗಿ ಅವರನ್ನು ಪ್ರತ್ಯೇಕಿಸಿರಿ ಎಂದು ಹೇಳಿದನು. 3ಆಗ ಅವರು ಉಪವಾಸವಿದ್ದು ಪ್ರಾರ್ಥನೆಮಾಡಿ ಆ ಇಬ್ಬರ ಮೇಲೆ ಹಸ್ತಾರ್ಪಣ ಮಾಡಿ ಅವರನ್ನು ಕಳುಹಿಸಿಕೊಟ್ಟರು.”
6. ಪ್ರಾರ್ಥನೆಯು ಸುವಾರ್ತೆಯ ಹರಡುವಿಕೆ ಮತ್ತು ಜನರ ರಕ್ಷಣೆಯನ್ನು ಉತ್ತೇಜಿಸುತ್ತದೆ.
2 ಥೆಸಲೋನಿಕದವರಿಗೆ 3:1 “ಕಡೇ ಮಾತೇನಂದರೆ, ಸಹೋದರರೇ, ನಮಗೋಸ್ಕರ ಪ್ರಾರ್ಥನೆಮಾಡಿರಿ. ಕರ್ತನ ವಾಕ್ಯವು ನಿಮ್ಮಲ್ಲಿ ಹಬ್ಬಿದ ಪ್ರಕಾರ ಎಲ್ಲೆಲ್ಲಿಯೂ ಬೇಗನೆ ಹಬ್ಬಿ ಪ್ರಖ್ಯಾತಿ ಹೊಂದುವ ಹಾಗೆಯೂ.”
7. ಪ್ರಾರ್ಥನೆಯು ಛಲವನ್ನು [ನಿರಂತರ ಪರಿಶ್ರಮ] ಉತ್ತೇಜಿಸುತ್ತದೆ.
2 ಕೊರಿಂಥದವರಿಗೆ 12:7-10 “…ನಾನು ನನ್ನನ್ನು ಅತಿಶಯವಾಗಿ ಹೆಚ್ಚಿಸಿಕೊಳ್ಳಬಾರದೆಂದು ಒಂದು ಶೂಲ ನನ್ನ ಶರೀರದಲ್ಲಿ ನಾಟಿದೆಯೋ ಎಂಬಂತೆ ನನ್ನನ್ನು ಗುದ್ದುವದಕ್ಕೆ ಸೈತಾನನ ದೂತರಲ್ಲಿ ಒಬ್ಬನು ನನ್ನ ಬಳಿಗೆ ಕಳುಹಿಸಲ್ಪಟ್ಟನು; ಈ ಪೀಡೆಯ ವಿಷಯದಲ್ಲಿ ಅದು ನನ್ನನ್ನು ಬಿಟ್ಟುಹೋಗಬೇಕೆಂದು ಮೂರು ಸಾರಿ ಕರ್ತನನ್ನು ಬೇಡಿಕೊಂಡೆನು. ಅದಕ್ಕಾತನು – ನನ್ನ ಕೃಪೆಯೇ ನಿನಗೆ ಸಾಕು; ಬಲಹೀನತೆಯಲ್ಲಿಯೇ ಬಲವು ಪೂರ್ಣಸಾಧಕವಾಗುತ್ತದೆ ಎಂದು ನನಗೆ ಹೇಳಿದ್ದಾನೆ.”
8. ಪ್ರಾರ್ಥನೆಯು, ನಮ್ಮ ಜೀವಿತಗಳಲ್ಲಿ ದೇವರ ಮತ್ತು ಆತನ ಉದ್ದೇಶಗಳ ಕುರಿತಾದ ಆಳವಾದ ತಿಳುವಳಿಕೆಯನ್ನು ಉತ್ತೇಜಿಸುತ್ತದೆ.
ಎಫೆಸ 1:15-19 “…ನಮ್ಮ ಕರ್ತನಾದ ಯೇಸು ಕ್ರಿಸ್ತನ ದೇವರೂ ಪ್ರಭಾವಸ್ವರೂಪನಾದ ತಂದೆಯೂ ಆಗಿರುವಾತನು ತನ್ನ ವಿಷಯವಾಗಿ ತಿಳುವಳಿಕೆಯನ್ನು ಕೊಟ್ಟು ಇದುವರೆಗೆ ಗುಪ್ತವಾಗಿದ್ದ ಸತ್ಯಾರ್ಥಗಳನ್ನು ತಿಳುಕೊಳ್ಳುವ ಜ್ಞಾನವುಳ್ಳ ಆತ್ಮವನ್ನು ನಿಮಗೆ ದಯಪಾಲಿಸಬೇಕೆಂದು ಪ್ರಾರ್ಥಿಸುತ್ತೇನೆ. ಆತನು ನಿಮ್ಮ ಮನೋನೇತ್ರಗಳನ್ನು ಬೆಳಗಿಸಿ ಆತನಿಂದ ಕರಿಸಿಕೊಂಡವರು ನಿರೀಕ್ಷಿಸುವ ಪದವಿ ಎಂಥದೆಂಬದನ್ನೂ ದೇವಜನರೆಂಬ ಆತನ ಸ್ವಾಸ್ಥ್ಯದ ಮಹಿಮಾತಿಶಯವು ಎಂಥದೆಂಬದನ್ನೂ ನಂಬುವವರಾದ ನಮ್ಮಲ್ಲಿ ಆತನು ಸಾಧಿಸುವ ಪರಾಕ್ರಮವು ಎಷ್ಟು ಅತಿಶಯವಾದದ್ದೆಂಬದನ್ನೂ ನೀವು ತಿಳುಕೊಳ್ಳುವಂತೆ ಅನುಗ್ರಹಿಸಲಿ.”
9. ಕರ್ತನಾದ ಯೇಸುವು ನಮ್ಮ ಮೇಲೆ ಹೊಂದಿರುವ ಪ್ರೀತಿಯ ಆಳವಾದ ತಿಳುವಳಿಕೆಯನ್ನು ಪ್ರಾರ್ಥನೆಯು ಉತ್ತೇಜಿಸುತ್ತದೆ.
ಎಫೆಸದವರಿಗೆ 3:14-19 “ಪ್ರೀತಿಯಲ್ಲಿ ಬೇರೂರಿರುವ ಮತ್ತು ಸ್ಥಾಪಿತವಾಗಿರುವ ನೀವು, ಕರ್ತನ ಎಲ್ಲಾ ಪವಿತ್ರ ಜನರೊಂದಿಗೆ ಕ್ರಿಸ್ತನ ಪ್ರೀತಿಯು ಎಷ್ಟು ವಿಶಾಲ ಮತ್ತು ದೀರ್ಘ ಮತ್ತು ಉನ್ನತ ಮತ್ತು ಆಳವಾಗಿದೆ ಎಂಬುದನ್ನು ಗ್ರಹಿಸುವ ಶಕ್ತಿಯನ್ನು ಹೊಂದಿರಲಿ ಮತ್ತು ಜ್ಞಾನವನ್ನು ಮೀರಿದ ಈ ಪ್ರೀತಿಯನ್ನು ತಿಳಿಯಲಿ ಎಂದು ನಾನು ಪ್ರಾರ್ಥಿಸುತ್ತೇನೆ…”
10. ಪ್ರಾರ್ಥನೆಯು ದೆವ್ವದ ಆಕ್ರಮಣಗಳಿಗೆ ಪ್ರತಿರೋಧವನ್ನು ಉತ್ತೇಜಿಸುತ್ತದೆ.
ಯಾಕೋಬ 4:7-8 “ಹೀಗಿರಲಾಗಿ ದೇವರಿಗೆ ಒಳಗಾಗಿರಿ. ಸೈತಾನನನ್ನು ಎದುರಿಸಿರಿ, ಅವನು ನಿಮ್ಮನ್ನು ಬಿಟ್ಟು ಓಡಿಹೋಗುವನು. 8ದೇವರ ಸಮೀಪಕ್ಕೆ ಬನ್ನಿರಿ, ಆಗ ಆತನು ನಿಮ್ಮ ಸಮೀಪಕ್ಕೆ ಬರುವನು.”
11. ಪ್ರಾರ್ಥನೆಯು ಕ್ಷಮೆಯನ್ನು ಉತ್ತೇಜಿಸುತ್ತದೆ.
ಮತ್ತಾಯ 6:12 “ನಮಗೆ ತಪ್ಪು ಮಾಡಿದವರನ್ನು ನಾವು ಕ್ಷವಿುಸಿದಂತೆ ನಮ್ಮ ತಪ್ಪುಗಳನ್ನು ಕ್ಷವಿುಸು.”
12. ಪ್ರಾರ್ಥನೆಯು ನಮ್ಮ ಹೃದಯಗಳಲ್ಲಿ ಶಾಂತಿಯನ್ನು ಉತ್ತೇಜಿಸುತ್ತದೆ.
ಫಿಲಿಪ್ಪಿ 4:6-7 “ಯಾವುದರ ಬಗ್ಗೆಯೂ ಚಿಂತಿತರಾಗಬೇಡಿರಿ, ಆದರೆ ಪ್ರತಿಯೊಂದು ಸಂದರ್ಭದಲ್ಲೂ ಪ್ರಾರ್ಥನೆ ಮತ್ತು ವಿನಂತಿಯ ಮೂಲಕ, ಕೃತಜ್ಞತೆಯಿಂದ ನಿಮ್ಮ ವಿನಂತಿಗಳನ್ನು ದೇವರಿಗೆ ಅರ್ಪಿಸಿರಿ. ಮತ್ತು ಎಲ್ಲಾ ತಿಳುವಳಿಕೆಯನ್ನು ಮೀರಿದ ದೇವರ ಶಾಂತಿಯು, ಕ್ರಿಸ್ತ ಯೇಸುವಿನಲ್ಲಿ ನಿಮ್ಮ ಹೃದಯಗಳನ್ನು ಮತ್ತು ನಿಮ್ಮ ಮನಸ್ಸನ್ನು ಕಾಪಾಡುತ್ತದೆ.”
ಈ ಪಟ್ಟಿಗೆ ಹೆಚ್ಚಿನ ಪ್ರಯೋಜನಗಳನ್ನು ಸೇರಿಸಬಹುದು. ಆದರೆ ಇವು ವಯಕ್ತಿಕವಾಗಿಯು ಮತ್ತು ಒಂದು ಸಭೆಯಾಗಿಯು ನಮ್ಮನ್ನು “ನಿರಂತರವಾಗಿ ಪ್ರಾರ್ಥಿಸುವಂತೆ” ಪ್ರೇರೇಪಿಸಲು ಸಾಕಾಗಬಹುದು [1 ಥೆಸ 5:17].