ನೀವು ಸಂಕಟವನ್ನು ಅನುಭವಿಸಿದಾಗ ಆಶ್ಚರ್ಯಪಡಬೇಡಿ

(English Version: “Don’t Be Surprised When You Go Through Suffering”)
1500ರ ದಶಕದ ಮಧ್ಯಭಾಗದಲ್ಲಿ, ಬೈಬಲನ್ನು ಇಂಗ್ಲಿಷ್ ಗೆ ಭಾಷಾಂತರಿಸಲಾಯಿತು. ಇಂಗ್ಲೆಂಡಿನಲ್ಲಿ ಬೈಬಲನ್ನು ಇಂಗ್ಲಿಷಿನಲ್ಲಿ ಸ್ವೀಕರಿಸಿದ ಮೊಟ್ಟಮೊದಲ ಸ್ಥಳಗಳಲ್ಲಿ ಹ್ಯಾಡ್ಲಿ ಪಟ್ಟಣವೂ ಒಂದಾಗಿತ್ತು. ಡಾ. ರೋಲ್ಯಾಂಡ್ ಟೇಲರ್ ಹ್ಯಾಡ್ಲಿಯ ಪಾಸ್ಟರ್ ಆಗಿದ್ದರು, ಅವರು ದೇವರ ವಾಕ್ಯವನ್ನು ನಂಬಿಗಸ್ತಿಕೆಯಿಂದ ಬೋಧಿಸಿದರು. ನಿರೀಕ್ಷಿಸಿದಂತೆ, ಲಂಡನ್ನ ಬಿಷಪ್ ಮತ್ತು ಲಾರ್ಡ್ ಚಾನ್ಸಲರ್ ಮುಂದೆ ಹಾಜರಾಗುವಂತೆ ಅವರಿಗೆ ಆದೇಶ ನೀಡಲಾಯಿತು. ಅವನನ್ನು ಧರ್ಮವಿರೋಧಿ ಎಂದು ಆಪಾದಿಸಲಾಯಿತು ಮತ್ತು ಬೈಬಲಿನ ಕುರಿತಾದ ತನ್ನ ನಿಲುವನ್ನು ಬದಲಾಯಿಸಲು ಅಥವಾ ಪಣಕ್ಕಿಡಲು ಅವನಿಗೆ ಒಂದು ಅವಕಾಶವನ್ನು ನೀಡಲಾಯಿತು.
ಅವನು ಧೈರ್ಯದಿಂದ ಉತ್ತರಿಸಿದನು, “ನಾನು ಸತ್ಯವನ್ನು ಸಾರುವುದನ್ನು ಬಿಡುವುದಿಲ್ಲ ಮತ್ತು ಆತನ ವಾಕ್ಯಕ್ಕಾಗಿ ಕಷ್ಟಾನುಭವಿಸಲು ಅರ್ಹನಾಗಿರಲು ನನ್ನನ್ನು ಕರೆದಿದ್ದಕ್ಕಾಗಿ ನಾನು ದೇವರಿಗೆ ಕೃತಜ್ಞನಾಗಿದ್ದೇನೆ ಎಂದು ಹೇಳಿದನು.” ಅವನನ್ನು ತಕ್ಷಣವೇ ಕಂಬದಲ್ಲಿ ಸುಡಲು ಹ್ಯಾಡ್ಲಿಗೆ ಮರಳಿ ಕಳುಹಿಸಲಾಯಿತು. ದಾರಿಯುದ್ದಕ್ಕೂ, ಅವನು ಎಷ್ಟು ಸಂತೋಷ ಮತ್ತು ಉಲ್ಲಾಸದಿಂದ ಇದ್ದನೆಂದರೆ, ನೋಡುವ ಯಾರಾದರೂ ಅವನು ಔತಣಕೂಟ ಅಥವಾ ಮದುವೆಗೆ ಹೋಗುತ್ತಿದ್ದಾನೆ ಎಂದು ಭಾವಿಸುತ್ತಿದ್ದರು. ತನ್ನ ಕಾವಲುಗಾರರಿಗೆ ಅವನು ಹೇಳಿದ ಮಾತುಗಳು ಆಗಾಗ್ಗೆ ಅವರು ತಮ್ಮ ದುಷ್ಟ ಮತ್ತು ಕೆಟ್ಟ ಜೀವನದಿಂದ ಪಶ್ಚಾತ್ತಾಪಪಡುವಂತೆ ಮನಃಪೂರ್ವಕವಾಗಿ ಕರೆಯುತ್ತಿದ್ದಾಗ ಅವರನ್ನು ಅಳುವಂತೆ ಮಾಡಿದನು. ಅವನು ಅಷ್ಟು ದೃಢವಾಗಿ, ನಿರ್ಭೀತನಾಗಿ, ಸಂತೋಷದಿಂದ ಹೋಗುತ್ತಿದ್ದನು ಮತ್ತು ಸಾಯಲು ಸಂತೋಷಪಡುವುದನ್ನು ನೋಡಿ ಅವರು ಆಶ್ಚರ್ಯಚಕಿತರಾದರು.
ಅವರು ಅವನನ್ನು ಸುಡುವ ಸ್ಥಳವನ್ನು ತಲುಪಿದಾಗ, ಡಾ. ಟೇಲರ್ ಅಲ್ಲಿ ನೆರೆದಿದ್ದ ತಮ್ಮ ಸಭೆಯ ಎಲ್ಲರಿಗೂ ಕಣ್ಣೀರು ಸುರಿಸುತ್ತಾ ಹೇಳಿದನು, “ದೇವರ ಪವಿತ್ರ ವಾಕ್ಯ ಮತ್ತು ದೇವರ ಆಶೀರ್ವಾದದ ಪುಸ್ತಕವಾದ ಪವಿತ್ರ ಬೈಬಲಿನಿಂದ ನಾನು ತೆಗೆದುಕೊಂಡ ಭೋಧನೆ ಹೊರತುಪಡಿಸಿ ನಾನು ನಿಮಗೆ ಏನನ್ನೂ ಕಲಿಸಿಲ್ಲ. ಅದನ್ನು ನನ್ನ ರಕ್ತದಿಂದ ಮುಚ್ಚಲು ನಾನು ಈ ದಿನ ಇಲ್ಲಿಗೆ ಬಂದಿದ್ದೇನೆ.”
ಅವನು ಮಂಡಿಯೂರಿ, ಪ್ರಾರ್ಥಿಸಿ, ಕಂಬದ ಬಳಿಗೆ ಹೋದನು. ಅವನು ಕಂಬವನ್ನು ಚುಂಬಿಸಿದನು, ಅದರ ವಿರುದ್ಧ ನಿಂತನು, ತನ್ನ ಕೈಗಳನ್ನು ಒಟ್ಟಿಗೆ ಜೋಡಿಸಿ ಮತ್ತು ತನ್ನ ಕಣ್ಣುಗಳನ್ನು ಪರಲೋಕದ ಕಡೆಗೆ ನೋಡಿದನು. ಅವನು ನಿರಂತರವಾಗಿ ಪ್ರಾರ್ಥಿಸಿದನು. ಅವರು ಅವನನ್ನು ಸರಪಳಿಗಳಿಂದ ಕಟ್ಟಿಹಾಕಿದರು, ಮತ್ತು ಹಲವಾರು ಜನರು ಕಟ್ಟಿಗೆಯನ್ನು ಆ ಸ್ಥಳದಲ್ಲಿ ಇರಿಸಿದರು. ಅವರು ಬೆಂಕಿಯನ್ನು ಹೊತ್ತಿಸುತ್ತಿದ್ದಂತೆ, ಡಾ. ಟೇಲರ್ ತನ್ನ ಎರಡೂ ಕೈಗಳನ್ನು ಮೇಲಕ್ಕೆತ್ತಿ ದೇವರನ್ನು ಕರೆದು, “ಪರಲೋಕದ ಕರುಣಾಮಯಿ ತಂದೆಯೇ, ನನ್ನ ರಕ್ಷಕನಾದ ಯೇಸು ಕ್ರಿಸ್ತನಿಗಾಗಿ, ನನ್ನ ಆತ್ಮವನ್ನು ನಿನ್ನ ಕೈಗಳಿಗೆ ಸ್ವೀಕರಿಸು” ಎಂದು ಹೇಳಿದನು.
ಅವನು ಅಳದೆ ಅಥವಾ ಅಲ್ಲಾಡದೆ ಜ್ವಾಲೆಯಲ್ಲಿ ನಿಂತಿದ್ದನು, ಅವನ ಕೈಗಳನ್ನು ಒಟ್ಟಿಗೆ ಜೋಡಿಸಲಾಗಿತ್ತು. ಅವನನ್ನು ಆ ಸಂಕಟದಿಂದ ಮತ್ತಷ್ಟು ಪಾರುಮಾಡಲು, ಆ ಪಟ್ಟಣದ ಒಬ್ಬ ವ್ಯಕ್ತಿಯು ಬೆಂಕಿಯ ಕಡೆಗೆ ಓಡಿ ಅವನ ತಲೆಗೆ ಬಲವಾಗಿ ಕೊಡಲಿಯಿಂದ ಹೊಡೆದನು. ಟೇಲರ್ ತಕ್ಷಣ ಸತ್ತನು ಅವನ ಶವ ಬೆಂಕಿಗೆ ಬಿದ್ದಿತು.
ನಾವು ಇಂತಹ ಕಥೆಯನ್ನು ಮತ್ತು ಇದೇ ರೀತಿಯ ಇನ್ನೂ ಅನೇಕ ಕಥೆಗಳನ್ನು ಓದಿದಾಗ, ಟೇಲರ್ ನಂತಹ ಜನರು ಅಂತಹ ಸಂಕಟವನ್ನು ಸಹಿಸಿಕೊಳ್ಳಲು ಕಾರಣವೇನು ಎಂದು ನಾವು ಆಶ್ಚರ್ಯ ಪಡುತ್ತೇವೆ. ಅದಕ್ಕೆ ಒಂದು ಕಾರಣವೆಂದರೆ, ಕ್ರೈಸ್ತ ಜೀವನವು ದುಃಖಕ್ಕೆ ಕರೆ ಎಂದು ಅವರಿಗೆ ತಿಳಿದಿದೆ ಮತ್ತು ಆದ್ದರಿಂದ ದುಃಖ ಬಂದಾಗ ಅವರು ಆಶ್ಚರ್ಯಪಡಲಿಲ್ಲ ಎಂದು ನಾನು ನಂಬುತ್ತೇನೆ. ಅವರು 1 ಪೇತ್ರ 4:12ರ ಮಾತುಗಳನ್ನು ಹೃದಯದಲ್ಲಿಟ್ಟುಕೊಳ್ಳುತ್ತಾರೆ, “ಪ್ರಿಯರೇ, ನೀವು ಪರಿಶೋಧನೆಗಾಗಿ ಪುಟಕ್ಕೆ ಹಾಕಲ್ಪಟ್ಟದ್ದಕ್ಕೆ ಆಶ್ಚರ್ಯಪಡಬೇಡಿರಿ; ವಿಪರೀತವಾದ ಸಂಗತಿ ಸಂಭವಿಸಿತೆಂದು ಯೋಚಿಸಬೇಡಿರಿ.”
“ಆಶ್ಚರ್ಯಪಡಬೇಡ” ಎಂದು ಹೇಳುವ ಮೂಲಕ ಪೇತ್ರನು ಪ್ರಾರಂಭಿಸುತ್ತಾನೆ. ಇದೊಂದು ಆಜ್ಞೆ. “ಕ್ರೈಸ್ತ ಜೀವನದ ಒಂದು ಭಾಗವಾಗಿ ಕಷ್ಟಾನುಭವಿಸಬೇಕೆಂದು ನಿರೀಕ್ಷಿಸಿ” ಎಂಬುದು ಅವನು ಹೇಳುತ್ತಿರುವುದು . ನೀವು ನೋಡಿ, ಶೋಧನೆಗಳಿಗೆ ಹೋಗುವಾಗ ಆಘಾತವನ್ನು ಪ್ರದರ್ಶಿಸುವುದು ಸಾಮಾನ್ಯ ಮಾನವ ಪ್ರತಿಕ್ರಿಯೆಯಾಗಿದೆ, ಮತ್ತು “ವಿಚಿತ್ರವಾದದ್ದು” ನನಗೆ ಸಂಭವಿಸುತ್ತಿದೆ ಎಂದು ಯೋಚಿಸಬಹುದು. ಆದಾಗ್ಯೂ, ತಿಳುವಳಿಕೆಯುಳ್ಳ ಕ್ರೈಸ್ತನಿಗೆ ಅದು ಹಾಗಿರಕೂಡದು. ಶೋಧನೆಗಳು ಬಂದಾಗ ನಾವು ಆಶ್ಚರ್ಯಪಡಬಾರದು; ಬದಲಾಗಿ, ನಾವು ಅದನ್ನು ನಿರೀಕ್ಷಿಸಬೇಕು. ಕಷ್ಟಾನುಭವಿಸಬೇಕೆಂದು ನಿರೀಕ್ಷಿಸುವಂತೆ ಮತ್ತು ಪರೀಕ್ಷೆಗಳು ಬಂದಾಗ ಆಶ್ಚರ್ಯಪಡಬೇಡಿ ಎಂದು ಬೈಬಲ್ ನಮಗೆ ಪದೇ ಪದೇ ನೆನಪಿಸುತ್ತದೆ. ಕರ್ತನಾದ ಯೇಸುವಿನಿಂದ ಕೆಲವು ಉದಾಹರಣೆಗಳು ಇಲ್ಲಿವೆ.
ಮತ್ತಾಯ 5:11 “ನನ್ನ ನಿವಿುತ್ತವಾಗಿ ಜನರು ನಿಮ್ಮನ್ನು ನಿಂದಿಸಿ ಹಿಂಸೆಪಡಿಸಿ ನಿಮ್ಮ ಮೇಲೆ ಕೆಟ್ಟ ಕೆಟ್ಟ ಮಾತುಗಳನ್ನು ಸುಳ್ಳಾಗಿ ಹೊರಿಸಿದರೆ ನೀವು ಧನ್ಯರು.”
ಮತ್ತಾಯ 10:34-36 “ಭೂಲೋಕದ ಮೇಲೆ ಸಮಾಧಾನ ಹುಟ್ಟಿಸುವದಕ್ಕೆ ಬಂದೆನೆಂದು ನೆನಸಬೇಡಿರಿ; ಸಮಾಧಾನವನ್ನು ಹುಟ್ಟಿಸುವದಕ್ಕೆ ನಾನು ಬಂದಿಲ್ಲ, ಖಡ್ಗವನ್ನು ಹಾಕುವದಕ್ಕೆ ಬಂದೆನು. 35ಹೇಗಂದರೆ ಮಗನಿಗೂ ತಂದೆಗೂ, ಮಗಳಿಗೂ ತಾಯಿಗೂ, ಸೊಸೆಗೂ ಅತ್ತೆಗೂ ಭೇದ ಹುಟ್ಟಿಸುವದಕ್ಕೆ ಬಂದೆನು. 36ಹೀಗೆ ಒಬ್ಬ ಮನುಷ್ಯನಿಗೆ ಅವನ ಮನೆಯವರೇ ವೈರಿಗಳಾಗುವರು.”
ಮಾರ್ಕ 10:29-30 “ನಿಮಗೆ ಸತ್ಯವಾಗಿ ಹೇಳುತ್ತೇನೆ, ಯಾವನು ನನ್ನ ನಿವಿುತ್ತವೂ ಸುವಾರ್ತೆಯ ನಿವಿುತ್ತವೂ ಮನೆಯನ್ನಾಗಲಿ ಅಣ್ಣತಮ್ಮಂದಿರನ್ನಾಗಲಿ ಅಕ್ಕತಂಗಿಯರನ್ನಾಗಲಿ ತಾಯಿಯನ್ನಾಗಲಿ ತಂದೆಯನ್ನಾಗಲಿ ಮಕ್ಕಳನ್ನಾಗಲಿ ಭೂವಿುಯನ್ನಾಗಲಿ ಬಿಟ್ಟುಬಿಟ್ಟಿರುವನೋ 30ಅವನಿಗೆ ಈಗಿನ ಕಾಲದಲ್ಲಿ ಮನೆ ಅಣ್ಣ ತಮ್ಮ ಅಕ್ಕ ತಂಗಿ ತಾಯಿ ಮಕ್ಕಳು ಭೂವಿು ಇವೆಲ್ಲವೂ ಹಿಂಸೆಗಳು ಸಹಿತವಾಗಿ ನೂರರಷ್ಟು ಸಿಕ್ಕೇ ಸಿಕ್ಕುತ್ತವೆ; ಮತ್ತು ಮುಂದಣ ಲೋಕದಲ್ಲಿ ನಿತ್ಯಜೀವವು ದೊರೆಯುವದು.”
ಯೋಹಾನ 15:20 “ದಣಿಗಿಂತ ಆಳು ದೊಡ್ಡವನಲ್ಲವೆಂಬದಾಗಿ ನಾನು ನಿಮಗೆ ಹೇಳಿದ ಮಾತನ್ನು ಜ್ಞಾಪಕಮಾಡಿಕೊಳ್ಳಿರಿ. ಅವರು ನನ್ನನ್ನು ಹಿಂಸೆಪಡಿಸಿದರೆ ನಿಮ್ಮನ್ನು ಸಹ ಹಿಂಸೆಪಡಿಸುವರು; ಅವರು ನನ್ನ ಮಾತನ್ನು ಕೈಕೊಂಡು ನಡೆದರೆ ನಿಮ್ಮ ಮಾತನ್ನು ಸಹ ಕೈಕೊಂಡು ನಡೆಯುವರು.”
ಇತರ ಹೊಸ ಒಡಂಬಡಿಕೆಯ ಬರಹಗಾರರು ಸಹ ಈ ವಿಚಾರವನ್ನು ನಮಗೆ ನೆನಪಿಸುತ್ತಾರೆ. ಪೌಲನು 2 ತಿಮೊಥೆಯ 3:12ರಲ್ಲಿ ನಮಗೆ ಹೇಳುತ್ತಾನೆ, “ವಾಸ್ತವದಲ್ಲಿ, ಸ್ತ ಯೇಸುವಿನಲ್ಲಿ ಸದ್ಭಕ್ತರಾಗಿ ಜೀವಿಸುವದಕ್ಕೆ ಮನಸ್ಸುಮಾಡುವವರೆಲ್ಲರೂ ಹಿಂಸೆಗೊಳಗಾಗುವರು.” 1 ಯೋಹಾನ 3:13ರಲ್ಲಿ ನಮಗೆ ನೆನಪಿಸುತ್ತಾನೆ, “ನನ್ನ ಸಹೋದರ ಸಹೋದರಿಯರೇ, ಲೋಕವು ನಿಮ್ಮನ್ನು ದ್ವೇಷಿಸಿದರೆ ಆಶ್ಚರ್ಯಪಡಬೇಡಿರಿ.”
ನಾವು ಅಪೊಸ್ತಲರ ಕೃತ್ಯಗಳಪುಸ್ತಕವನ್ನು ಅಥವಾ ಇಬ್ರಿಯರ 11ನೆಯ ಅಧ್ಯಾಯವನ್ನು ಓದಿದಾಗ, ಚರ್ಚಿನ [ಸಭೆಯ] ಆರಂಭಿಕ ವರ್ಷಗಳಲ್ಲಿ ದೇವರ ಜನರು ಅನುಭವಿಸಿದ ಕಷ್ಟಗಳು ಕಲ್ಲಿನಿಂದ ಹೊಡೆಸಿಕೊಂಡಿರುವುದು, ಸೆರೆವಾಸಗಳು, ಚಾಟಿಯಿಂದ ಹೊಡೆಯುವುದು ಮತ್ತು ಕೊಲೆಗಳ ಬಗ್ಗೆ ನಮಗೆ ಸ್ಪಷ್ಟವಾಗಿ ನೆನಪಾಗುತ್ತದೆ. ಚರ್ಚ್ ಇತಿಹಾಸವು 1 ನೇ ಶತಮಾನದಿಂದ ಇಂದಿನವರೆಗೂ ಲೋಕದ ಕೈಯಲ್ಲಿ ದೇವರ ಜನರು ಅನುಭವಿಸುತ್ತಿರುವ ಯಾತನೆಗೆ ಸಾಕ್ಷಿಯಾಗಿದೆ. ಪಾಪ ಈ ಲೋಕದಲ್ಲಿರುವುದರಿಂದ, ಸೈತಾನನ ಜನರು ಮತ್ತು ದೇವರ ಜನರ ನಡುವೆ ನಿರಂತರ ದ್ವೇಷವಿದೆ. ಸೈತಾನನು ದೇವರ ವಿರುದ್ಧ ನಿಂತಿರುವುದರಿಂದ, ದೇವರನ್ನು ಮತ್ತು ದೇವರ ಪರವಾಗಿ ನಿಲ್ಲುವ ಎಲ್ಲರನ್ನೂ ದ್ವೇಷಿಸುವಂತೆ ಅವನು ತನ್ನ ಮಕ್ಕಳನ್ನು ಪ್ರಚೋದಿಸುವನು. ಆದುದರಿಂದ, ಯೇಸು ಕ್ರಿಸ್ತನು ಮತ್ತು ಅಪೊಸ್ತಲರಿಬ್ಬರೂ ಸಂಕಟದ ವಾಸ್ತವಿಕತೆಯ ಕುರಿತು ನಮಗೆ ಎಚ್ಚರಿಸುತ್ತಾರೆ ಎಂಬುದು ಸ್ಪಷ್ಟವಾಗಿದೆ.
1 ಪೇತ್ರ 4:12 ಕ್ಕೆ ಹಿಂತಿರುಗಿ ನೋಡಿದಾಗ. ನಾವು ಕೆಲವೊಮ್ಮೆ ಎದುರಿಸುವ ಪರೀಕ್ಷೆಗಳನ್ನು “ಅಗ್ನಿಪರೀಕ್ಷೆ” ಎಂದು ಹೋಲಿಸಬಹುದು ಎಂದು ಪೇತ್ರನು ವಿವರಿಸುತ್ತಾನೆ. ಕ್ರೈಸ್ತರು ಕಷ್ಟಗಳನ್ನು ನಿರೀಕ್ಷಿಸಬೇಕು ಮತ್ತು ಅವುಗಳಿಂದ ಆಶ್ಚರ್ಯಪಡಬಾರದು, ಆದರೆ ಕೆಲವೊಮ್ಮೆ, ಈ ಪರೀಕ್ಷೆಗಳು ತೀವ್ರವಾಗಿರುತ್ತವೆ ಅಥವಾ ಕಠಿಣವಾಗಿರುತ್ತವೆ. “ಉರಿಯುತ್ತಿರುವ” [ಸುಡುವ] ಎಂಬ ಪದದ ಅರ್ಥವೂ ಇದೇ ಆಗಿದೆ. ಅದೇ ಪದವನ್ನು ಹಳೆಯ ಒಡಂಬಡಿಕೆಯಲ್ಲಿ “ಕುಲುಮೆ” ಎಂದು ಭಾಷಾಂತರಿಸಲಾಗಿದೆ. ಪೇತ್ರನು ಆ ಸಮಯದಲ್ಲಿ ಕ್ರೈಸ್ತರಿಗೆ ಬರೆದ ಅನುಭವದ ತೀವ್ರತೆಯನ್ನು ಮತ್ತು ನಮ್ಮ ಜೀವಿತದಲ್ಲಿ ಮತ್ತು ಮುಂದಿನ ದಿನಗಳಲ್ಲಿ ಕೆಲವರು ಏನನ್ನು ಅನುಭವಿಸುತ್ತಿದ್ದಾರೆ ಎಂಬುದನ್ನು ಇದು ವಿವರಿಸುತ್ತದೆ.
ಈ ಹಂತದಲ್ಲಿ, “ಅಂತಹ ತೀವ್ರವಾದ ಯಾತನೆಯ ಅರ್ಥವೇನು?” ಎಂದು ಒಬ್ಬರು ಕೇಳಬಹುದು. ಪೇತ್ರನು ಆ ಪ್ರಶ್ನೆಗೆ ಈ ಮಾತುಗಳಿಂದ ಉತ್ತರಿಸುತ್ತಾನೆ, “ಉರಿಯುತ್ತಿರುವ ಅಗ್ನಿಪರೀಕ್ಷೆ… ನಿಮ್ಮನ್ನು ಪರೀಕ್ಷಿಸಲು ನಿಮ್ಮ ಮೇಲೆ ಬಂದಿರುವಂತಹದ್ದು.” ದುಃಖವು ನಮ್ಮನ್ನು ಪರೀಕ್ಷಿಸಲು ಬರುತ್ತದೆ. ನಿಜವಾದ ನಂಬಿಕೆಯು ಶೋಧನೆಯ ಪರೀಕ್ಷೆಗಳ ಮೂಲಕ ಉಳಿಯುತ್ತದೆ. ಪರೀಕ್ಷೆಗಳಿಗೆ ಒಳಗಾಗುವಾಗ ಸುಳ್ಳು ನಂಬಿಕೆಯು ಕುಸಿಯುತ್ತದೆ. ಇದಕ್ಕೂ ಮೊದಲು, 1 ಪೇತ್ರ 1:6-7ರಲ್ಲಿ, ಪೇತ್ರನು ಚಿನ್ನವು ಪರೀಕ್ಷಿಸಲ್ಪಟ್ಟು ಬೆಂಕಿಯಿಂದ ಪರಿಶುದ್ಧಗೊಂಡಂತೆಯೇ ಕ್ರೈಸ್ತರ ನಂಬಿಕೆಯು ಯಾತನೆಯಿಂದ ಪರೀಕ್ಷಿಸಲ್ಪಡುತ್ತದೆ ಮತ್ತು ಪರಿಶುದ್ಧಗೊಳ್ಳುತ್ತದೆ ಎಂಬುದರ ಕುರಿತು ಮಾತಾಡಿದನು. ಬೆಂಕಿಯು ಚಿನ್ನದ ಗುಣಮಟ್ಟವನ್ನು ಬಹಿರಂಗಪಡಿಸುತ್ತದೆ ಮತ್ತು ಅದು ನೈಜವಾಗಿದ್ದರೆ, ಸುಡುವ ಪ್ರಕ್ರಿಯೆಗೆ ಒಳಗಾದ ನಂತರ ಅದು ಇನ್ನಷ್ಟು ಶುದ್ಧವಾಗಿ ಹೊರಬರುತ್ತದೆ. ನಿಜವಾದ ಕ್ರೈಸ್ತನ ವಿಷಯದಲ್ಲೂ ಅದೇ ಆಗಿದೆ. ಪರೀಕ್ಷೆಗಳಿಗೆ ಒಳಗಾದ ನಂತರ ಅವನು ಅಥವಾ ಅವಳು ಪರಿಶುದ್ಧರಾಗುತ್ತಾರೆ.
ವಿಶ್ವಾಸಿಗಳಿಗೆ ಯಾತನೆಯ ಆವಶ್ಯಕತೆ ಇದೆ . ಇಲ್ಲದಿದ್ದರೆ ನಾವು ನಮ್ಮ ಗುರುವಿನಂತೆ ಆಗಲು ಹೇಗೆ ಸಾಧ್ಯ? ನಮ್ಮ ಶತ್ರುಗಳನ್ನು ಪ್ರೀತಿಸಲು, ನಮ್ಮನ್ನು ದ್ವೇಷಿಸುವವರಿಗೆ ಒಳ್ಳೆಯದನ್ನು ಮಾಡಲು ಮತ್ತು ನಮ್ಮನ್ನು ಹಿಂಸಿಸುವವರಿಗಾಗಿ ಪ್ರಾರ್ಥಿಸಲು ನಾವು ಹೇಗೆ ಕಲಿಯಬಲ್ಲೆವು? ಇಲ್ಲದಿದ್ದರೆ ನಾವು ಹೆಚ್ಚು ವಿನಮ್ರರಾಗಲು, ಹೆಚ್ಚು ಸೌಮ್ಯವಾಗಲು, ಹೆಚ್ಚು ಮುರಿದುಹೋಗಲು, ಇತರರ ಅಗತ್ಯಗಳಿಗೆ ಹೆಚ್ಚು ಸಂವೇದನಾಶೀಲರಾಗಲು ಹೇಗೆ ಸಾಧ್ಯ? ನಮ್ಮನ್ನು ಶುದ್ಧೀಕರಿಸಲು ದೇವರು ಪರೀಕ್ಷೆಗಳನ್ನು ಉಪಯೋಗಿಸುತ್ತಾನೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಾವು ವಿಫಲವಾದಾಗ, ಪೇತ್ರನು ನಾವು ಪರೀಕ್ಷೆಗಳಿಗೆ “ವಿಚಿತ್ರವಾದದ್ದೇನೋ ನಡೆಯುತ್ತಿರುವಂತೆ” ಪ್ರತಿಕ್ರಿಯಿಸುತ್ತೇವೆಂದು ಹೇಳುತ್ತಾನೆ?
ದುರದೃಷ್ಟವಶಾತ್, “ನನಗೆ ವಿಚಿತ್ರವಾದದ್ದು ಸಂಭವಿಸುತ್ತಿದೆ” ಎಂಬುದು ಕ್ರೈಸ್ತರೆಂದು ಹೇಳಿಕೊಳ್ಳುವ ಅನೇಕರ ಪ್ರತಿಕ್ರಿಯೆಯಾಗಿದೆ. ಪ್ರಾಯಶಃ, ಕ್ರೈಸ್ತ ಜೀವನವು ಆರೋಗ್ಯ, ಸಂಪತ್ತು ಮತ್ತು ಸಂತೋಷದ ಸಮಸ್ಯೆರಹಿತ ಜೀವನವಾಗಿದೆ ಎಂದು ಅವರಿಗೆ ವಾಗ್ದಾನ ಮಾಡಲಾಯಿತು—ಇದು ಬೈಬಲ್ ಕಲಿಸುವದಕ್ಕೆ ತದ್ವಿರುದ್ಧವಾಗಿದೆ. ಮತ್ತು ಅಂತಹ ಜನರು ಪರೀಕ್ಷೆಗಳನ್ನು ಎದುರಿಸಿದಾಗ ಅವರಿಗೆ ಪ್ರತಿಕ್ರಿಯಿಸಲು ಸರಿಯಾದ ಮಾರ್ಗ ತಿಳಿದಿಲ್ಲ. ಆದುದರಿಂದಲೇ ಜನರು ಕ್ರಿಸ್ತನನ್ನು ಅನುಸರಿಸುವ ಮೊದಲು ಅದರೆ ಬೆಲೆಯನ್ನು ಎಣಿಸುವುದು ಪ್ರಾಮುಖ್ಯವಾಗಿದೆ.
ಯೇಸು ಕ್ರಿಸ್ತನು, ಜನರು ತನ್ನನ್ನು ಅನುಸರಿಸುವ ಮೊದಲು ಅದರಿಂದ ಆಗುವಂತಹ ವೆಚ್ಚವನ್ನು ಯೋಚಿಸಬೇಕೆಂದು ತಿಳಿಸುತ್ತಾನೆ [ಲೂಕ 14:26-35]. ತಮ್ಮ ನಂಬಿಕೆಗಾಗಿ ಬೆಲೆ ತೆರಬೇಕಾಗಿ ಬಂದಾಗ ಆತನನ್ನ ಬಿಟ್ಟು ಹೋಗುವ ಅರ್ಧ ಹೃದಯದ ಶಿಷ್ಯರನ್ನು ಮಾಡುವಲ್ಲಿ ಆತನಿಗೆ ಎಂದಿಗೂ ಆಸಕ್ತಿಯಿರಲಿಲ್ಲ. ಪರೀಕ್ಷೆಗಳು ಬಂದಾಗ ಬಿಟ್ಟುಹೋಗುವವರು ಬಂಡೆ ಕಲ್ಲಿನ ಸ್ಥಳಗಳ ಮೇಲೆ ಬಿದ್ದ ಬೀಜದಂತೆ ಭಾವನಾತ್ಮಕ ಆಧಾರದ ಮೇಲೆ ಕ್ರಿಸ್ತನಿಗೆ ಪ್ರತಿಕ್ರಿಯಿಸುವವರು. ಅಂತಹ ಜನರನ್ನು ಯೇಸು ಈ ಕೆಳಗಿನ ರೀತಿಯಲ್ಲಿ ವರ್ಣಿಸುತ್ತಾನೆ, “16 ಇತರರು ಕಲ್ಲಿನ ಸ್ಥಳಗಳಲ್ಲಿ ಬಿತ್ತಿದ ಬೀಜದಂತೆ, ಆ ವಾಕ್ಯವನ್ನು ಕೇಳಿ ಅದನ್ನು ಸಂತೋಷದಿಂದ ಸ್ವೀಕರಿಸುತ್ತಾರೆ. 17 ಆದರೆ ಅವುಗಳಿಗೆ ಬೇರು ಇಲ್ಲದಿರುವುದರಿಂದ ಅವು ಅಲ್ಪಾವಧಿಯವರೆಗೆ ಮಾತ್ರ ಉಳಿಯುತ್ತವೆ. ವಾಕ್ಯದ ಕಾರಣದಿಂದಾಗಿ ತೊಂದರೆ ಅಥವಾ ಹಿಂಸೆ ಬಂದಾಗ, ಅವರು ಬೇಗನೆ ಬಿದ್ದುಹೋಗುತ್ತಾರೆ” [ಮಾರ್ಕ 4:16-17].
ಮತ್ತೊಂದೆಡೆ, ಬೆಲೆಯನ್ನು ಎಣಿಸುವವರು ತಮ್ಮ ಸಂಪೂರ್ಣ ಪಾಪ ಮತ್ತು ದುಃಖವನ್ನು ಗುರುತಿಸಿ, ಪವಿತ್ರಾತ್ಮನಿಂದ ಶಕ್ತಗೊಳಿಸಲ್ಪಟ್ಟಂತೆ ಕ್ರಿಸ್ತನ ನಿಯಮಗಳ ಪ್ರಕಾರ ಕ್ರಿಸ್ತನ ಬಳಿಗೆ ಬರುತ್ತಾರೆ. ಅಂತಹ ಜನರು ಒಳ್ಳೇ ಮಣ್ಣಿನ ಬೀಜದಂತಿದ್ದಾರೆ ಮತ್ತು ಪರೀಕ್ಷೆಗಳನ್ನು ಎದುರಿಸುವಾಗ ಅವರು ಸಹಿಸಿಕೊಳ್ಳುವರು, “ಆದರೆ ಒಳ್ಳೆಯ ಮಣ್ಣಿನಲ್ಲಿರುವ ಬೀಜವು ಶ್ರೇಷ್ಟ ಮತ್ತು ಒಳ್ಳೆಯ ಹೃದಯವುಳ್ಳವರಿಗಾಗಿ, ವಾಕ್ಯವನ್ನು ಕೇಳುವ, ಅದನ್ನು ಉಳಿಸಿಕೊಳ್ಳುವ ಮತ್ತು ಪಟ್ಟುಹಿಡಿದು ಬೆಳೆಯನ್ನು ಉತ್ಪಾದಿಸುವವರನ್ನು ಸೂಚಿಸುತ್ತದೆ” [ಲೂಕ 8:15]. ಅವರು ಕಷ್ಟವನ್ನು ನಿರೀಕ್ಷಿಸುತ್ತಾರೆ ಮತ್ತು ಅದು ಬಂದಾಗ ಅಂತಹ ಪರೀಕ್ಷೆಗಳಿಂದ ಆಶ್ಚರ್ಯಪಡುವುದಿಲ್ಲ. ಆದ್ದರಿಂದ ಅವರು ಸಹಿಸಿಕೊಳ್ಳುತ್ತಾರೆ!
ದುಃಖವನ್ನು ಅನುಭವಿಸಲು ಮತ್ತು ಅದರಿಂದ ಆಶ್ಚರ್ಯಪಡದಿರಲು ಪವಿತ್ರಾತ್ಮದ ಮೂಲಕ ನಮಗೆ ನೆನಪಿಸುವಂತೆ ಕರ್ತನನ್ನು ನಿರಂತರವಾಗಿ ಕೇಳೋಣ. ನಾವು ಯೇಸುವಿಗಾಗಿ ಜೀವಿಸುವಾಗ ವಿವಿಧ ರೂಪಗಳಲ್ಲಿ ತಿರಸ್ಕಾರಗಳು ಮತ್ತು ಸಂಕಟಗಳು ಬರುತ್ತವೆ. ಈ ರೀತಿಯ ಬೈಬಲ್ ತಿಳುವಳಿಕೆಯನ್ನು ಹೊಂದಿರುವುದು ಕನಿಷ್ಠ ಎರಡು ವಿಷಯಗಳನ್ನು ಸಾಧಿಸುತ್ತದೆ:
(1) ಕಷ್ಟಗಳ ಮೂಲಕ ಸಾಗುವಾಗ ದೇವರ ವಿರುದ್ಧ ಗೊಣಗುವುದನ್ನು ಅದು ತಡೆಯುತ್ತದೆ.
(2) ಪೌಲನು ಫಿಲಿಪ್ಪಿ 1:29ರಲ್ಲಿ ನಮಗೆ ನೆನಪಿಸಿದಂತೆ ಯೇಸುವಿಗಾಗಿ ಕಷ್ಟಾನುಭವಿಸುವುದು ಒಂದು ಸುಯೋಗವೆಂದು ಪರಿಗಣಿಸುವುದು ನಮ್ಮ ಹೃದಯಗಳನ್ನು ಬಲಪಡಿಸುತ್ತದೆ, “ಏಕೆಂದರೆ ಕ್ರಿಸ್ತನ ಪರವಾಗಿ ಆತನಲ್ಲಿ ನಂಬಿಕೆಯಿಡುವುದಷ್ಟೇ ಅಲ್ಲ, ಆತನಿಗಾಗಿ ಕಷ್ಟಾನುಭವಿಸುವುದೂ ಸಹ ನಿಮಗೆ ಕೊಡಲ್ಪಟ್ಟಿದೆ” [ಫಿಲಿಪ್ಪಿ 1:29]!