ನೀವು ನಿಜವಾದ ಕ್ರೈಸ್ತರೋ ಅಥವಾ “ಬಹುತೇಕ” ಕ್ರೈಸ್ತರೋ?

(English Version: “Are You A Real Christian Or An “Almost” Christian?”)
ಫೆಬ್ರವರಿ 26, 1993 ರಂದು, ನ್ಯೂಯಾರ್ಕ್ ನಗರದ ವರ್ಲ್ಡ್ ಟ್ರೇಡ್ ಸೆಂಟರ್‌ನ ನೆಲದಡಿಯ ಪಾರ್ಕಿಂಗ್ ಗ್ಯಾರೇಜಿನಲ್ಲಿ ಪ್ರಬಲ ಬಾಂಬ್ ಸ್ಫೋಟಗೊಂಡು ಆರು ಜನರು ಮೃತಪಟ್ಟರು ಮತ್ತು ಒಂದು ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಇದು ಅನೇಕ ಬಂಧನಗಳೊಂದಿಗೆ ಆಕ್ರಮಣಕಾರಿ ತನಿಖೆಯನ್ನು ಪ್ರಚೋದಿಸಿತು. ಆದರೆ ಕೆಲವು ಕಾನೂನು ಜಾರಿ ಅಧಿಕಾರಿಗಳು ಇದನ್ನು ಅಂತರರಾಷ್ಟ್ರೀಯ ಭಯೋತ್ಪಾದಕ ಪಿತೂರಿಯ ಭಾಗವೆಂದು ಗುರುತಿಸಿದರು.
2001 ರಲ್ಲಿ ಭಯೋತ್ಪಾದಕರು ವರ್ಲ್ಡ್ ಟ್ರೇಡ್ ಸೆಂಟರ್ ಕಟ್ಟಡವನ್ನು ನಾಶಪಡಿಸಿದಾಗ, ಪೊಲೀಸ್ ಕಮಿಷನರ್ ರೇಮಂಡ್ ಕೆಲ್ಲಿ ಮೊದಲ ದಾಳಿಯ ಬಗ್ಗೆ ಹಿಂತಿರುಗಿ ನೋಡಿ, “ಇದು ಅಮೆರಿಕಕ್ಕೆ ಎಚ್ಚರಿಕೆಯ ಕರೆಗಂಟೆಯಾಗಬೇಕಿತ್ತು” ಎಂದು ಹೇಳಿದರು.
ಮತ್ತಾಯ 25:1-13 ರಲ್ಲಿನ ಒಂದು ಸಾಮ್ಯದ ಮೂಲಕ ಸ್ವತಃ ಕರ್ತನಾದ ಯೇಸುಕ್ರಿಸ್ತನು ಹಲವಾರು ತೀವ್ರವಾದ ಎಚ್ಚರಿಕೆಯ ಕರೆಯನ್ನು ನೀಡಿದ್ದಾರೆ, ಅದರಲ್ಲಿ ಆತನು ಕ್ರೈಸ್ತನೆಂದು ಹೇಳಿಕೊಳ್ಳುವ ಪ್ರತಿಯೊಬ್ಬನಿಗೂ ಪ್ರಾಮಾಣಿಕವಾದ ಮತ್ತು ಆತ್ಮಶೋಧನೆಯ ಪ್ರಶ್ನೆಯನ್ನು ಕೇಳುತ್ತಾನೆ, “ನೀನು ಒಬ್ಬ ನಿಜವಾದ ಕ್ರೈಸ್ತನೋ ಅಥವಾ ಬಹುತೇಕ ಕ್ರೈಸ್ತನೋ?” ಮತ್ತು ನಾವು ಈ ಭಾಗವನ್ನು ನೋಡುತ್ತಿರುವಾಗ, ಈ ಪ್ರಶ್ನೆಯ ಗಂಭೀರತೆಯನ್ನು ನಾವು ಹೃದಯಕ್ಕೆ ತೆಗೆದುಕೊಳ್ಳೋಣ ಮತ್ತು ಸೂಕ್ತವಾಗಿ ಪ್ರತಿಕ್ರಿಯಿಸೋಣ.
I. ಸಾಮ್ಯವನ್ನು ವಿವರಿಸಲಾಗಿದೆ.
ಒಂದು ಸಾಮ್ಯವು ಆತ್ಮಿಕ ಸತ್ಯಗಳನ್ನು ಕಲಿಸಲು ವಿನ್ಯಾಸಗೊಳಿಸಲ್ಪಟ್ಟಿರುವ ದೈನಂದಿನ ಜೀವನದ ಸನ್ನಿವೇಶವನ್ನು ಆಧರಿಸಿದ ಒಂದು ದೃಷ್ಟಾಂತವಾಗಿದೆ. ಈ ಸಾಮ್ಯವು ಮದುಮಗನು ತನ್ನ ವಧುವನ್ನು ಮದುವೆಯಾಗಲು ಮತ್ತು ಅವಳನ್ನು ತನ್ನೊಂದಿಗೆ ಇರಲು ಮನೆಗೆ ಕರೆದೊಯ್ಯಲು ಬರುವ ಬಗ್ಗೆ. ದಿನದ ಪದ್ಧತಿಯ ಪ್ರಕಾರ, ವಧು-ವರನನ್ನು ಸ್ವಾಗತಿಸಿ ವಧುವಿನ ಮನೆಗೆ ಕರೆದೊಯ್ಯುತ್ತಿದ್ದರು. ಮದುಮಗನು ರಾತ್ರಿಯಲ್ಲಿಯೂ ಬರಬಹುದಾದ್ದರಿಂದ, ವಧು–ವರರು ಬೆಳಕನ್ನು ಒದಗಿಸಲು ದೀಪಗಳನ್ನು ಒಯ್ಯಬೇಕಾಗಿತ್ತು.
ಈ ನಿರ್ದಿಷ್ಟ ಕಥೆಯಲ್ಲಿ, ಮದುಮಗ ಮಧ್ಯರಾತ್ರಿಯಲ್ಲಿ ಕಾಣಿಸಿಕೊಂಡನು. ಅವನನ್ನು ಕರೆದೊಯ್ಯಲು ಒಟ್ಟು ಹತ್ತು ವಧುವರರು ಕಾಯುತ್ತಿದ್ದರು. ಅವರಲ್ಲಿ ಐವರ ಬಳಿ ಎಣ್ಣೆಯ ದೀಪಗಳಿದ್ದವು, ಉಳಿದ ಐದರಲ್ಲಿ ದೀಪಗಳಿದ್ದವು, ಆದರೆ ಅವುಗಳನ್ನು ಬೆಳಗಿಸಲು ಎಣ್ಣೆ ಇರಲಿಲ್ಲ. ಎಣ್ಣೆಯನ್ನು ಹಿಡಿದವರು ಮದುಮಗನೊಂದಿಗೆ ಮದುವೆಯ ಕೂಟಕ್ಕೆ ಹೋದರು. ಆದಾಗ್ಯೂ, ಉಳಿದವರನ್ನು ಅವರ ಮನವಿಯ ಹೊರತಾಗಿಯೂ ಮದುವೆಯ ಔತಣಕೂಟಕ್ಕೆ ಅನುಮತಿಸಲಿಲ್ಲ.
ಸಾಮ್ಯದಲ್ಲಿರುವ ಮದುಮಗನು ಯೇಸುಕ್ರಿಸ್ತನು ಪ್ರತಿನಿಧಿಸುತ್ತಾನೆ. ಎಣ್ಣೆಯನ್ನು ಹೊಂದಿದ್ದ ಬುದ್ಧಿವಂತ ಕನ್ಯೆಯರು [ವಧುವರರು] ಯೇಸುವನ್ನು ಭೇಟಿಯಾಗಲು ಸಿದ್ಧರಾಗಿರುವ ನಿಜವಾದ ಕ್ರೈಸ್ತರನ್ನು ಪ್ರತಿನಿಧಿಸುತ್ತಾರೆ. ಎಣ್ಣೆಯನ್ನು ಹೊಂದಿರದ ಐವರು ಮೂರ್ಖ ಕನ್ಯೆಯರು, ಕ್ರಿಸ್ತನನ್ನು ಭೇಟಿಯಾಗಲು ಸಿದ್ಧರಿಲ್ಲದ ಮತ್ತು ಪರಲೋಕದಿಂದ ಹೊರಗಿಡಲ್ಪಡುವ ಅಪಾಯದಲ್ಲಿರುವ ಸುಳ್ಳು ಕ್ರೈಸ್ತರನ್ನು ಪ್ರತಿನಿಧಿಸುತ್ತಾರೆ.
ಈ ದೃಷ್ಟಾಂತದ ಮುಖ್ಯ ಅಂಶವು 13ನೆಯ ವಚನದಲ್ಲಿ ಸಂಕ್ಷೇಪಿಸಲ್ಪಟ್ಟಿದೆ, “ಆದುದರಿಂದ ಜಾಗರೂಕರಾಗಿರಿ, ಏಕೆಂದರೆ ನಿಮಗೆ ದಿನವಾಗಲಿ ಅಥವಾ ಘಳಿಗೆಯಾಗಲಿ ತಿಳಿದಿಲ್ಲ.” ಬೇರೆ ರೀತಿಯಲ್ಲಿ ಹೇಳುವುದಾದರೆ, “ಈ ದಿನವೇ ಯೇಸುಕ್ರಿಸ್ತನ್ನು ಎದುರುನೋಡಲು ಸಿದ್ಧರಾಗಿರಿ. ಏಕೆಂದರೆ, ಪಾಪಗಳಿಗಾಗಿ ಕ್ಷಮೆಯನ್ನು ಪಡೆಯುವುದು ಅಸಾಧ್ಯವಾಗುವ ಕಾಲ ಸನ್ನಿಹಿತವಾಗಿದೆ. ಒಮ್ಮೆ ನೀವು ಈ ಭೂಮಿಯನ್ನು ತೊರೆದ ನಂತರ ಪರಲೋಕಕ್ಕೆ ಪ್ರವೇಶಿಸಲು ಎರಡನೆಯ ಅವಕಾಶಗಳು ಇರುವುದಿಲ್ಲ.”
II. ಸಾಮ್ಯದ ಅನ್ವಯ.
ನಾವು ಈ ಸಾಮ್ಯವನ್ನು ನೋಡುತ್ತಿರುವಾಗ, ನಾವು 3 ಸತ್ಯಗಳನ್ನು ಅನ್ವಯವಾಗಿ ತಳಿದುಕಳ್ಳಬಹುದು
ಸತ್ಯ #1. ಒಬ್ಬನು ಮೇಲ್ನೋಟಕ್ಕೆ [ಹೋರಗೆ] ಕ್ರಿಸ್ತನವನು ಎಂದು ಹೇಳಿಕೊಳ್ಳಬಹುದು ಮತ್ತು ಆದರೆ ಅವನನ್ನು ಎಂದಿಗೂ ತನ್ನ ಹೃದಯದಲ್ಲಿ ಹೊಂದಿರುವುದಿಲ್ಲ.
ಬುದ್ಧಿವಂತ ಕನ್ಯೆಯರು ಮತ್ತು ಮೂರ್ಖ ಕನ್ಯೆಯರ ನಡುವೆ ಅನೇಕ ಹೋಲಿಕೆಗಳಿದ್ದವು. ಇಬ್ಬರೂ ದೀಪಗಳನ್ನು ತೆಗೆದುಕೊಂಡು ಮದುಮಗನನ್ನು ಭೇಟಿಯಾಗಲು ಕಾಯುತ್ತಿದ್ದರು [ಮತ್ತಾಯ 25:1]. ಮೂರ್ಖ ಕನ್ಯೆಯರು ಮದುಮಗನ ಆಗಮನವನ್ನು ವಿರೋಧಿಸಲಿಲ್ಲ. ಅವರು ಅವನ ಆಗಮನಕ್ಕಾಗಿ ಕಾಯುತ್ತಿರುವಂತೆ ತೋರಿತು.
ಅದೇ ಪ್ರಕಾರದಲ್ಲಿ, ಕ್ರೈಸ್ತರೆಂದು ಹೇಳಿಕೊಳ್ಳುವ ಅನೇಕರು, ತಾವು ಯೇಸುವಿನ ಬರುವಿಕೆಗಾಗಿ ಎದುರುನೋಡುತ್ತಿರುವುದಾಗಿಯೂ ಹೇಳಿಕೊಳ್ಳುತ್ತಾರೆ— ಆದರೆ ಅವರನ್ನು ಭೇಟಿಮಾಡಲು ತಾವು ಸರಿಯಾಗಿ ಸಿದ್ಧರಾಗಿರುವುದಿಲ್ಲ. ಮದುಮಗನು ತನ್ನ ಆಗಮನವನ್ನು ತಡಮಾಡುತ್ತಿದ್ದಂತೆ, ಬುದ್ಧಿವಂತ ಮತ್ತು ಮೂರ್ಖ ಕನ್ಯೆಯರು ಇಬ್ಬರೂ ನಿದ್ರೆಗೆ ಜಾರಿದರು.
ಬುದ್ಧಿವಂತ ಕನ್ಯೆಯರು ರಕ್ಷಣೆ ಭಾವನೆಯಿಂದ ನಿದ್ರಿಸುತ್ತಿದ್ದರು. ಅವರು ಕ್ರಿಸ್ತನೊಂದಿಗೆ ಸರಿಯಾದ ಸಂಬಂಧವನ್ನು ಹೊಂದಿರುವುದರಿಂದ ನಿಜವಾದ ರಕ್ಷಣೆ ಹೊಂದಿರುವ ನಿಜವಾದ ವಿಶ್ವಾಸಿಗಳನ್ನು ಪ್ರತಿನಿಧಿಸುತ್ತಾರೆ.
ಮೂರ್ಖ ಕನ್ಯೆಯರು ಕೂಡ ರಕ್ಷಣೆ ಹೊಂದಿರುವ ಭಾವನೆಯಿಂದ ನಿದ್ರಿಸುತ್ತಿರುವಂತೆ ತೋರಿತು. ಆದರೆ ಅವರು ನಿಜವಾಗಲೂ ರಕ್ಷಣೆ ಹೊಂದದೆ ತಮ್ಮ ಹೃದಯವನ್ನು ಮೋಸಮಾಡಿಕೊಂಡ ಪರಿಣಾಮವಾಗಿ ಸುಳ್ಳು ರಕ್ಷಣೆ ಹೊಂದಿರುವ ಸುಳ್ಳು ವಿಶ್ವಾಸಿಗಳನ್ನು ಪ್ರತಿನಿಧಿಸುತ್ತಾರೆ. ತಾವು ಚರ್ಚಿಗೆ ಹೋದದ್ದರಿಂದ, ಕೆಲವು ಹೊರಗೆ ಕಾಣುವಂತೆ “ಕ್ರೈಸ್ತ” ಚಟುವಟಿಕೆಗಳನ್ನು ಮಾಡಿ, ಮತ್ತು ಇತರ ಕ್ರೈಸ್ತರ ಸುತ್ತಲೂ ಇದ್ದದರಿಂದ ತಾವು ಕ್ರಿಸ್ತನಿಗಾಗಿ ಸಿದ್ಧರಾಗಿದ್ದೇವೆಂದು ಅವರು ಭಾವಿಸಿದರು. ದುಃಖಕರ ಸತ್ಯವೇನೆಂದರೆ, ಅವರು ಎಂದಿಗೂ ತಮ್ಮ ಪಾಪಗಳಿಗಾಗಿ ನಿಜವಾಗಿಯೂ ಪಶ್ಚಾತ್ತಾಪ ಪಡಲಿಲ್ಲ ಮತ್ತು ಹೀಗೆ ಕ್ರಿಸ್ತನಲ್ಲಿ ಹೊಸದಾಗಿ ಹುಟ್ಟುವುದನ್ನ ಎಂದಿಗೂ ಅನುಭವಿಸಲಿಲ್ಲ.
ಅನೇಕ ಗುಣಲಕ್ಷಣಗಳು ಸುಳ್ಳು ಕ್ರೈಸ್ತರ ಜೀವನವನ್ನು ಗುರುತಿಸುತ್ತವೆ.
a. ದೇವರ ಬಗ್ಗೆ ಅವರ ದೃಷ್ಟಿಕೋನವು ತಪ್ಪಾಗಿದೆ. ದೇವರು ಪ್ರೀತಿಉಳ್ಳವನು ಮತ್ತು ಪ್ರೀತಿಯಲ್ಲದೆ ಬೇರೇನೂ ಅಲ್ಲ. ಅವರು ಎಂದಿಗೂ ನನ್ನನ್ನು ಹೊರಹಾಕುವುದಿಲ್ಲ. ನಾನು ಅವನ ಮುಂದೆ ನಿಂತಾಗ, ನನ್ನನ್ನು ಪರಲೋಕಕ್ಕೆ ಬಿಡುವಂತೆ ನಾನು ಅವನನ್ನು ಮನವೊಲಿಸಬಲ್ಲೆ. ಮೂರ್ಖ ಕನ್ಯೆಯರ ದೃಷ್ಟಿಕೋನವು ಅವರ ಹತಾಶ ಕೂಗುಗಳಿಂದ ಸಾಕ್ಷಿಯಾಗಿದೆ, “ಸ್ವಾಮಿ, ಸ್ವಾಮಿ… ನಮಗಾಗಿ ಬಾಗಿಲನ್ನು ತೆರೆಯಿರಿ” [ಮತ್ತಾಯ 25:11].
ದೇವರು ಪ್ರೀತಿ ಸ್ವರೂಪನಾಗಿದ್ದರೂ, ಆತನು ಕೇವಲ ಪ್ರೀತಿಯಲ್ಲ. ಆತನು ಪರಿಶುದ್ಧನು ಮತ್ತು ನ್ಯಾಯಸ್ಥಾಪಕನು. ತನ್ನ ಮಗನಲ್ಲಿ [ಯೋಹಾನ 3:18] ನಂಬಿಕೆಯಿಡದವರನ್ನು ಶಿಕ್ಷಿಸುವುದಾಗಿ ಅವನು ತನ್ನ ವಾಕ್ಯದಲ್ಲಿ ವಾಗ್ದಾನ ಮಾಡಿದ್ದಾನೆ. ದೇವರು ತನ್ನ ವಾಕ್ಯಕ್ಕೆ ವಿರುದ್ಧವಾಗಿ ಏನನ್ನಾದರೂ ಮಾಡುವುದು ಅವನನ್ನು ಸುಳ್ಳುಗಾರನನ್ನಾಗಿ ಮಾಡುತ್ತದೆ—ಮತ್ತು ಅದು ಅಸಾಧ್ಯವಾಗಿದೆ!
b. ಪಾಪದ ಬಗ್ಗೆ ಅವರ ದೃಷ್ಟಿಕೋನವು ತಪ್ಪಾಗಿದೆ. ಸುಳ್ಳು ಕ್ರೈಸ್ತರು ಪಾಪದ ಮೇಲಿನ ದೃಢನಿಶ್ಚಯವನ್ನು ನಿಜವಾದ ಮಾನಸಾಂತರವೆಂದು ನಂಬುತ್ತಾರೆ. ಪಾಪದ ದೃಢನಿಶ್ಚಯವು ನಿಜವಾದ ಮಾನಸಾಂತರಕ್ಕೆ ಮುಂಚಿತವಾಗಿ ಬಂದರೂ, ನಿಜವಾದ ಮಾನಸಂತರವಿಲ್ಲದೆ ಪಾಪದ ದೃಢನಿಶ್ಚಯದ ಪ್ರಜ್ಞೆಯನ್ನು ಹೊಂದಲು ಸಹ ಸಾಧ್ಯವಿದೆ.
ಯೂದನು, ಫೆಲಿಕ್ಸ್ ಮತ್ತು ಏಸಾವು ತಮ್ಮ ಪಾಪಗಳ ವಿಷಯದಲ್ಲಿ ಅರಿವು ಹೊಂದಿದ್ದರು, ಆದರೆ ಅವರು ಎಂದಿಗೂ ರಕ್ಷಣೆಹೊಂದಿರಲಿಲ್ಲ [ಮತ್ತಾಯ 27:3-5; ಅ. ಕೃತ್ಯಗಳು 24:25; ಇಬ್ರಿಯ 12:16-17]. ಕೇವಲ ಪಾಪದ ವಿಷಯದಲ್ಲಿ ದುಃಖವನ್ನು ಅನುಭವಿಸುವುದು ಒಬ್ಬ ಕ್ರೈಸ್ತನೆಂಬದಕ್ಕೆ ರುಜುವಾತಲ್ಲ. ಆ ದುಃಖವು ಪಶ್ಚಾತಾಪಪಟ್ಟು ಒಬ್ಬನನ್ನು ಪಾಪದಿಂದ ವಿಮುಖನಾಗುವಂತೆ ಮಾಡಿ, ಕರುಣೆಗಾಗಿ ಯೇಸುವಿನ ಪಾದದ ಮೇಲೆ ತಮ್ಮನ್ನು ತಾವು ಅರ್ಪಿಸಿಕೊಳ್ಳದ ಹೊರತು, ಅದು ಶಾಶ್ವತ ವಿನಾಶಕ್ಕೆ ಮಾತ್ರ ಕಾರಣವಾಗುವ ಒಂದು ಸುಳ್ಳು ದುಃಖವಾಗಿದೆ [2 ಕೊರಿ 7:9-10].
c. ಪ್ರಪಂಚದ ಬಗ್ಗೆ ಅವರ ದೃಷ್ಟಿಕೋನವು ತಪ್ಪಾಗಿದೆ. ಸುಳ್ಳು ಕ್ರೈಸ್ತರು ಲೋಕ ಮತ್ತು ಅದರ ಸುಖಭೋಗಗಳ ಬಗ್ಗೆ ಬಿಗಿಹಿಡಿದ ಪ್ರೀತಿಯಿಂದ ಗುರುತಿಸಲ್ಪಟ್ಟಿದ್ದಾರೆ. ಈ ಲೋಕದಲ್ಲಿ ಇರುವುದು ಯೇಸುವು ಖಂಡಿಸುವಂಥದ್ದಲ್ಲವೆಂಬುದನ್ನು ಅವರು ಗ್ರಹಿಸುವುದಿಲ್ಲ [ಯೋಹಾನ 17:15]. ಬದಲಾಗಿ, ಜಗತ್ತು ಅವರಲ್ಲಿರುವುದನ್ನು ಅವನು ಖಂಡಿಸುತ್ತಾನೆ!
1 ಯೋಹಾನ 2:15ರ ಬಗ್ಗೆ ತಿಳಿದಿದ್ದರೂ, ವಾಕ್ಯವು ಅಷ್ಟು ಸ್ಪಷ್ಟವಾಗಿ ಹೇಳುತ್ತದೆ, “ಲೋಕವನ್ನು ಅಥವಾ ಲೋಕದಲ್ಲಿರುವ ಯಾವುದನ್ನೂ ಪ್ರೀತಿಸಬೇಡ. ಯಾರಾದರೂ ಲೋಕವನ್ನು ಪ್ರೀತಿಸಿದರೆ, ತಂದೆಯ ಪ್ರೀತಿಯು ಅವರಲ್ಲಿ ಇರುವುದಿಲ್ಲ” ಅವರು ತಮ್ಮ ಇಡೀ ಜೀವನವನ್ನು ಲೌಕಿಕ ಬಯಕೆಗಳಿಗೆ ನಿರ್ದೇಶಿಸುತ್ತಾರೆ. ಮತ್ತು ಅವರು ಲೌಕಿಕ ವಿಷಯಗಳನ್ನು ಬೆನ್ನಟ್ಟುವಲ್ಲಿ ನಿರತರಾಗಿಲ್ಲದಿದ್ದರೆ, ಅವರು ಅವುಗಳ ಬಗ್ಗೆ ಕನಸು ಕಾಣುವುದರಲ್ಲಿ ನಿರತರಾಗಿದ್ದಾರೆ! “ನೀವು ದೇವರು ಮತ್ತು ಹಣ ಎರಡನ್ನೂ ಸೇವಿಸಲಾರಿರಿ” ಎಂಬ ಆಜ್ಞೆಗೆ ತಾವೊಂದೇ ಅಪವಾದವೆಂದು ಅವರು ಹೇಗೋ ಭಾವಿಸುತ್ತಾರೆ (ಮತ್ತಾಯ 6:24). ಅಷ್ಟರಮಟ್ಟಿಗೆ ಅವರು ಮೋಸಹೋಗಿದ್ದಾರೆ!
d. ಇತರರನ್ನು ಪ್ರೀತಿಸುವ ಅವರ ದೃಷ್ಟಿಕೋನವು ತಪ್ಪಾಗಿದೆ. ಇತರರೆಡೆಗಿನ ಒಂದು ಆಯ್ದ ಪ್ರೀತಿಯು ಸುಳ್ಳು ಕ್ರೈಸ್ತರ ಗುಣಲಕ್ಷಣಗಳನ್ನು ತೋರಿಸುತ್ತದೆ— ಅವರು ತಮ್ಮನ್ನು ಪ್ರೀತಿಸುವವರನ್ನು ಮಾತ್ರ ಪ್ರೀತಿಸುತ್ತಾರೆ. ಕ್ರೈಸ್ತರೆಂದು ಹೇಳಿಕೊಳ್ಳುವ ಅನೇಕರು ಅನೇಕ ವರ್ಷಗಳವರೆಗೆ ಇತರರ ಕಡೆಗೆ ಆಳವಾದ ಕಹಿಭಾವನೆಯನ್ನು ಆಥಾವ ಕಟುತ್ವವನ್ನು ತೋರಿಸುವುದನ್ನು ನೋಡುವುದು ಆಶ್ಚರ್ಯಕರವೂ ದುಃಖಕರವೂ ಆಗಿದೆ. ಅದು ಅವರ ಸಂಗಾತಿ, ಕುಟುಂಬ ಸದಸ್ಯರು, ಇತರ ಚರ್ಚಿನ ಸದಸ್ಯರು, ಸಹೋದ್ಯೋಗಿಗಳು, ನೆರೆಹೊರೆಯವರು, ಇತ್ಯಾದಿಗಳಿಗೆ ಸಂಬಂಧಿಸಿರಬಹುದು. ಅವರ ಸಾಮಾನ್ಯ ಆಲೋಚನೆ ಹೀಗಿದೆ: “ನಾನು ಸಾಮಾನ್ಯವಾಗಿ ಇತರರನ್ನು ಪ್ರೀತಿಸುತ್ತೇನೆ. ನಾನು ಪ್ರೀತಿಸಲು ಸಾಧ್ಯವಿಲ್ಲ ಎಂದು ಅದು ಹಾಗೆ ಮತ್ತು ಆದ್ದರಿಂದ ಮಾತ್ರ. ಅಷ್ಟಕ್ಕೂ, ಅವರು ನನಗೆ ತುಂಬಾ ನೋವುಂಟು ಮಾಡಿದ್ದಾರೆ.”
ಆದಾಗ್ಯೂ, ತಾನು ಕ್ರೈಸ್ತನೆಂದು ಹೇಳಿಕೊಳ್ಳುವವನ ಗುಣಲಕ್ಷಣವಾಗಿ ದ್ವೇಷವು ಇರಕೂಡದೆಂದು ದೇವರ ವಾಕ್ಯವು ನಮಗೆ ಸ್ಪಷ್ಟವಾಗಿ ಹೇಳುತ್ತದೆ. 1 ಯೋಹಾನ 4:20-21 ಹೇಳುತ್ತದೆ, “20 ದೇವರನ್ನು ಪ್ರೀತಿಸುವುದಾಗಿ ಹೇಳಿಕೊಳ್ಳುವವನು, ಒಬ್ಬ ಸಹೋದರ ಅಥವಾ ಸಹೋದರಿಯನ್ನು ದ್ವೇಷಿಸುವವನು ಸುಳ್ಳುಗಾರನಾಗಿದ್ದಾನೆ. ಯಾಕಂದರೆ, ತಾವು ನೋಡಿರುವ ತಮ್ಮ ಸಹೋದರ ಮತ್ತು ಸಹೋದರಿಯನ್ನು ಪ್ರೀತಿಸದಿರುವವರು, ತಾವು ನೋಡದ ದೇವರನ್ನು ಪ್ರೀತಿಸಲಾರರು. 21 ಮತ್ತು ಅವನು ನಮಗೆ ಈ ಆಜ್ಞೆಯನ್ನು ಕೊಟ್ಟಿದ್ದಾನೆ: ದೇವರನ್ನು ಪ್ರೀತಿಸುವ ಯಾರೇ ಆಗಲಿ ತಮ್ಮ ಸಹೋದರ ಸಹೋದರಿಯರನ್ನೂ ಪ್ರೀತಿಸಬೇಕು.” 1 ಯೋಹಾನ 3:13-15 ಮತ್ತು 1 ಯೋಹಾನ 4:7-8 ಇದೇ ವಿಷಯವನ್ನು ಒತ್ತಿಹೇಳುತ್ತವೆ.
ಆದ್ದರಿಂದ, ಹೊರಗೆ ಕಾಣುವಂತೆ ಅಥವಾ ಮೇಲ್ನೋಟಕ್ಕೆ ಕ್ರಿಸ್ತನವನು ಎಂದು ಹೇಳಿಕೊಳ್ಳುವುದು ಸಾಧ್ಯವಿದೆ ಮತ್ತು ಐದು ಮೂರ್ಖ ಕನ್ಯೆಯರಂತೆ ಅವನನ್ನು ಎಂದಿಗೂ ನಮ್ಮ ಹೃದಯದಿಂದ ಹೊಂದಿರುವುದಿಲ್ಲ. ಅದಕ್ಕಾಗಿಯೇ ನಾವೆಲ್ಲರೂ ನಮ್ಮ ಜೀವನವನ್ನು ಪರೀಕ್ಷೆ ಮಾಡಿಕೊಳ್ಳಬೇಕು ನಿಜವಾಗಿಯೂ ನಿತ್ಯ ಜೀವನವನ್ನು ಹೊಂದಿರುವವರು ಎಂದು ನೋಡಲು ನಮ್ಮ ಜೀವನವನ್ನು ಪರಿಶೀಲಿಸಬೇಕಾಗಿದೆ.
ಸತ್ಯ #2. ರಕ್ಷಣೆಯನ್ನು ವರ್ಗಾಯಿಸಲು ಅಥವಾ ಹಂಚಿಕೊಳ್ಳಲು ಸಾಧ್ಯವಿಲ್ಲ.
ಮದುಮಗನು ಬರುತ್ತಿದ್ದಂತೆ, ಮೂರ್ಖ ಕನ್ಯೆಯರು ತಮ್ಮ ದೀಪಗಳಿಗೆ ಎಣ್ಣೆ ಇಲ್ಲ ಎಂದು ಅರಿತುಕೊಂಡರು. ಅವರು ತಕ್ಷಣವೇ ಬುದ್ಧಿವಂತ ಕನ್ಯೆಯರನ್ನು ಕೇಳಿದರು, “ನಿಮ್ಮ ಎಣ್ಣೆಯಲ್ಲಿ ಸ್ವಲ್ಪ ನಮಗೆ ಕೊಡಿ; ನಮ್ಮ ದೀಪಗಳು ಆರಿಹೋಗುತ್ತಿವೆ,” ಎಂದು, ಅದಕ್ಕೆ ಅವರು ಪ್ರತಿಯಾಗಿ ಉತ್ತರಿಸಿದರು, “‘ಇಲ್ಲ,’ ನಮಗೂ ನಿಮಗೂ ಸಾಕಾಗದಿರಬಹುದು. ಬದಲಾಗಿ, ಎಣ್ಣೆ ಮಾರುವವರ ಬಳಿಗೆ ಹೋಗಿ, ನಿಮಗಾಗಿ ಸ್ವಲ್ಪವನ್ನು ಕೊಂಡುಕೊಳ್ಳುವವರ ಬಳಿಗೆ ಹೋಗಿ.” [ಮತ್ತಾಯ 25:8-9].
ಅವರು ಹೋಗಿ ತಮಗಾಗಿ ಎಣ್ಣೆಯನ್ನು ಖರೀದಿಸುವ ಹೊತ್ತಿಗೆ, ಅದು ತುಂಬಾ ತಡವಾಗಿತ್ತು. ಮದುವೆಯ ಕೂಟವು ಒಳಕ್ಕೆ ಹೋಯಿತು, “ಬಾಗಿಲನ್ನು ಮುಚ್ಚಲಾಯಿತು” [ಮತ್ತಾಯ 25:10]. ಬುದ್ಧಿವಂತ ಕನ್ಯೆಯರ ಸಿದ್ಧತೆಯ ಆಧಾರದ ಮೇಲೆ ಮೂರ್ಖ ಕನ್ಯೆಯರು ಒಳಗೆ ಹೋಗಲು ಸಾಧ್ಯವಾಗಲಿಲ್ಲ. ಅವರು ಮದುಮಗನಿಗೆ ಪ್ರತ್ಯೇಕವಾಗಿ ಸಿದ್ಧರಾಗಿರಬೇಕು. ಬೇರೆ ರೀತಿಯಲ್ಲಿ ಹೇಳುವುದಾದರೆ, ರಕ್ಷಣೆಯು ಪಾಪಿ ಮತ್ತು ಕರ್ತನ ನಡುವಿನ ವೈಯಕ್ತಿಕ ವ್ಯವಹಾರವಾಗಿದೆ. ಅದನ್ನು ವರ್ಗಾಯಿಸಲು ಅಥವಾ ಹಂಚಿಕೊಳ್ಳಲು ಸಾಧ್ಯವಿಲ್ಲ — ಯೇಸುಕ್ರಿಸ್ತನನ್ನು ಭೇಟಿಯಾಗಲು ಒಬ್ಬನು ವೈಯಕ್ತಿಕವಾಗಿ ಸಿದ್ಧನಾಗಿರಬೇಕು.
ಕ್ರೈಸ್ತರೆಂದು ಹೇಳಿಕೊಳ್ಳುವ ಅನೇಕರು ಈ ಮೂರ್ಖ ಕನ್ಯೆಯರಿದ್ದಂತೆ. ಅವರು ಯಾವ ಕ್ರೈಸ್ತ ಸಭೆಗೆ ಸೇರಿದವರು ಅಥವಾ ಅವರ ಹೆತ್ತವರು ಕ್ರೈಸ್ತರಾಗಿರುವುದರಿಂದ, ಅಥವಾ ಅವರ ಸಂಗಾತಿಯು ಕ್ರಿಶ್ಚಿಯನ್ನರಾಗಿರುವುದರ ಆಧಾರದ ಮೇಲೆ ದೇವರು ಅವರನ್ನು ಪರಲೋಕ್ಕಕೆ ಬಿಡುವನೆಂದು ಅವರು ಭಾವಿಸುತ್ತಾರೆ. ಸ್ವತಃ ಯೇಸುವೇ ಅಂತಹ ಸ್ವಯಂ-ಮೋಸದ ಜನರನ್ನು ಈ ಮಾತುಗಳ ಮೂಲಕ ಬಹಳ ಸ್ಪಷ್ಟವಾಗಿ ಎಚ್ಚರಿಸುತ್ತಾನೆ, “ನೀವು ಪಶ್ಚಾತ್ತಾಪಪಡದ ಹೊರತು ನೀವೆಲ್ಲರೂ ನಾಶವಾಗುವಿರಿ” [ಲೂಕ 13:3]. ಯೋಹಾನ 3:3ರಲ್ಲಿನ ಅವನ ಮಾತುಗಳು, ರಕ್ಷಣೆಯು ಒಂದು ವೈಯಕ್ತಿಕ ಅನುಭವವಾಗಿದೆ ಎಂಬುದನ್ನು ಮತ್ತಷ್ಟು ದೃಢೀಕರಿಸುತ್ತವೆ, “ನಿಜವಾಗಿಯೂ ನಾನು ನಿಮಗೆ ಹೇಳುತ್ತೇನೆ, ಅವರು ಹೊಸದಾಗಿ ಹುಟ್ಟದ ಹೊರತು ದೇವರ ರಾಜ್ಯವನ್ನು ಯಾರೂ ನೋಡಲಾರರು.”
ನಾವು ನಮ್ಮ ಜೀವನವನ್ನು ಪರೀಕ್ಷಿಸೋಣ. ನಾವು ಒಂದು ನಿರ್ದಿಷ್ಟ ಕ್ರೈಸ್ತ ಸಭೆಗೆ ಸೇರಿದವರಾಗಿರುವುದರಿಂದ, ಕ್ರೈಸ್ತ ಹೆತ್ತವರನ್ನು ಹೊಂದಿರುವುದರಿಂದ, ಅಥವಾ ಹೆಚ್ಚಿನವರಿಗಿಂತ ಉತ್ತಮರೆಂದು ಭಾವಿಸುವುದರಿಂದ ನಾವು ಪರಲೋಕವನ್ನು ಪ್ರವೇಶಿಸುತ್ತೇವೆಂದು ನಾವು ಭಾವಿಸುತ್ತೇವೆಯೇ? ಹಾಗಿದ್ದಲ್ಲಿ, ನಾವು ಮೋಸಹೋಗುತ್ತೇವೆ. ನಾವು ನಮ್ಮ ಪಾಪಗಳ ವಿಷಯದಲ್ಲಿ ದೃಢನಿಶ್ಚಯವನ್ನು ಅನುಭವಿಸದ ಹೊರತು, ಪಶ್ಚಾತ್ತಾಪಪಡದ ಹೊರತು ಮತ್ತು ವೈಯಕ್ತಿಕ ಆಧಾರದ ಮೇಲೆ ವಿಮೋಚನೆಗಾಗಿ ಕ್ರಿಸ್ತನ ಕಡೆಗೆ ತಿರುಗದ ಹೊರತು, ನಾವು ರಕ್ಷಿಸಲ್ಪಡುವುದಿಲ್ಲ.
ಸತ್ಯ #3. ಕ್ರೈಸ್ತ ನಂಬಿಕೆಯು ಜೀವಮಾನವಿಡೀ ಪರಿಶ್ರಮವನ್ನು ಬೇಡುತ್ತದೆ.
ಮದುಮಗನು ತನ್ನ ಆಗಮನವನ್ನು ತಡಮಾಡಿದರೂ, ಬುದ್ಧಿವಂತ ಕನ್ಯೆಯರು ಅವನ ಯಾವುದೇ ಕ್ಷಣದ ಆಗಮನಕ್ಕೆ ಸಿದ್ಧರಾಗಿದ್ದರು. ಅನಿರೀಕ್ಷಿತ ಸಮಯದಲ್ಲಿ, “ಮಧ್ಯರಾತ್ರಿ” [ v. 6] ಮದುಮಗನು ಬಂದರೂ, ಅವರು ಇನ್ನೂ ಸಿದ್ಧರಾಗಿದ್ದರು. ಇದು, ಕ್ರೈಸ್ತನಲ್ಲಿ ಕೊನೆಯವರೆಗೂ ನಂಬಿಕೆಯಲ್ಲಿ ನಿರಂತರವಾಗಿ ಮುಂದುವರಿಯಬೇಕು ಎಂಬುದನ್ನು ತೋರಿಸುತ್ತದೆ.
ಯೇಸು ನಮ್ಮನ್ನು “ಒಮ್ಮೊಮ್ಮೆ” ಅಥವಾ “ಯಾವಾಗಲಾದರೂ ಅನುಕೂಲಕರವಾಗಿರುವಾಗ” ವಿಧೇಯತೆಯನ್ನು ಪ್ರದರ್ಶಿಸುವಂತೆ ಕರೆಯುತ್ತಿಲ್ಲ. ನಾವು ಕ್ರಿಸ್ತನ ಕಡೆಗೆ ತಿರುಗಿದಾಗ, ಅವನನ್ನು ಹಿಂಬಾಲಿಸುವುದು ಜೀವನಪರ್ಯಂತದ ಬದ್ಧತೆಯಾಗಿದೆ — ಅದು ನಮಗೆ ನಮ್ಮ ಜೀವವನ್ನೇ ಪಣಕ್ಕಿಟ್ಟರೂ ಸಹ.
ದುಃಖಕರ ಸಂಗತಿಯೆಂದರೆ, ಇಂದು ಕ್ರಿಸ್ತನನ್ನು ಮತ್ತು ಅವನ ರಕ್ಷಣೆಯ ಪ್ರಸ್ತಾಪವನ್ನು ಒಂದು “ನರಕ-ವಿಮೆ” ನೀತಿಯಲ್ಲದೆ ಮತ್ತೇನೂ ಅಲ್ಲ — ಭೌತಿಕ ಆಶೀರ್ವಾದಗಳಲ್ಲದೆ ಬೇರೇನೂ ಇಲ್ಲದ ಪರಲೋಕಕ್ಕೆ ಹೋಗುವ ಒಂದು ಟಿಕೆಟ್ ಎಂದು ನೋಡುವ ಅನೇಕರು ಇದ್ದಾರೆ! ಸಮೃದ್ಧಿಯ ಸುವಾರ್ತೆಯು ನಮ್ಮ ಪೀಳಿಗೆಗೆ ಅಂತಹ ಆಕರ್ಷಣೆಯನ್ನು ನೀಡುವುದರಲ್ಲಿ ಆಶ್ಚರ್ಯವೇನಿಲ್ಲ! ತಮ್ಮನ್ನು ತಾವು ನಿರಾಕರಿಸಿ ಶಿಲುಬೆಯನ್ನು ಹೊತ್ತು ಸಾಗುವ ಸಂದೇಶವು ಇಂದು ಅನೇಕ “ಚರ್ಚುಗಳಲ್ಲಿ” ಸಹ ಹೆಚ್ಚು ಜನಪ್ರಿಯವಾಗಿಲ್ಲ. ಆದಾಗ್ಯೂ, ಅದು ಯೇಸುವಿನ ಸಂದೇಶವಾಗಿತ್ತು ಮತ್ತು ಈಗಲೂ ಇದೆ!
“ಇಕ್ಕಟ್ಟಾದ ದಾರಿಯ ಮೂಲಕ ಪ್ರವೇಶಿಸುವಂತೆ” ಯೇಸು ನಮಗೆ ಆಜ್ಞಾಪಿಸುತ್ತಾನೆ, ಏಕೆಂದರೆ “ಅಗಲವಾದ ದಾರಿಯು ವಿನಾಶಕ್ಕೆ ಎಡೆಮಾಡಿಕೊಡುವ ಮಾರ್ಗವು ಆಗಿದೆ” ಮತ್ತು “ನಿತ್ಯ ಜೀವಕ್ಕೆ ಕರೆದೊಯ್ಯುವ ಮಾರ್ಗವು ಚಿಕ್ಕದಾಗಿದೆ ಮತ್ತು ಕಿರಿದಾಗಿದೆ” [ಮತ್ತಾಯ 7:13-14]. ಗಮನಿಸಿರಿ ಪ್ರವೇಶ ದ್ವಾರವು ಕಿರಿದಾಗಿರುವುದು ಮಾತ್ರವಲ್ಲದೆ, ಕ್ರಿಶ್ಚಿಯನ್ ರಸ್ತೆಯೂ ಕಿರಿದಾಗಿದೆ. ಇಡೀ ಕ್ರೈಸ್ತ ಜೀವನವು ಒಂದು ಸವಾಲಿನ ಜೀವನವಾಗಿದ್ದು, ಅದು ಜೀವಮಾನವಿಡೀ ಪರಿಶ್ರಮವನ್ನು ಬಯಸುತ್ತದೆ.
ಯೇಸುವನ್ನು ಹಿಂಬಾಲಿಸುವುದರ ತ್ಯಾಗವನ್ನು ನಿಜವಾದ ಕ್ರೈಸ್ತರು ಅರ್ಥಮಾಡಿಕೊಳ್ಳುತ್ತಾರೆ. ನಿರಂತರವಾಗಿ ಆತನನ್ನು ಹಿಂಬಾಲಿಸುವ ವೆಚ್ಚವು, ಅವನನ್ನು ಹಿಂಬಾಲಿಸದಿರುವ ವೆಚ್ಚಕ್ಕೆ ಹೋಲಿಸಿದರೆ ಬಹಳ ಕಡಿಮೆ ಎಂದು ಅವರು ಅರ್ಥಮಾಡಿಕೊಳ್ಳುತ್ತಾರೆ. ಆದುದರಿಂದಲೇ ಅವರು ಪಾಪದಲ್ಲಿ, ಸೈತಾನನೊಂದಿಗೆ ಮತ್ತು ಲೋಕದೊಂದಿಗಿನ ಅವಿರತ ಹೋರಾಟಗಳ ಹೊರತಾಗಿಯೂ ಪಟ್ಟುಹಿಡಿಯುತ್ತಾರೆ. ಅವರು ಪಾಪಮಾಡಿದಾಗಲೂ, ಅವರು ನಿಜವಾದ ಪಶ್ಚಾತ್ತಾಪದಿಂದ ಹಿಂತಿರುಗುತ್ತಾರೆ. ಪಾಪವು ತಮ್ಮ ಪಾಪಗಳಿಗಾಗಿ ಶಿಲುಬೆಯ ಮೇಲೆ ಮರಣಹೊಂದಿದ ತಮ್ಮ ಕರ್ತನನ್ನು ದುಃಖಪಡಿಸುತ್ತದೆ ಎಂದು ತಿಳಿದಿರುವ ಅವರು ಪಾಪದಲ್ಲಿಯೆ ಉಳಿಯುವುದಿಲ್ಲ. ತಮ್ಮ ರಕ್ಷಕನು ಅಂತಹ ಭಯಾನಕ ಬೆಲೆಯನ್ನು ತೆರಬೇಕಾದ ಪಾಪವನ್ನು ಪೋಷಿಸುವ ಮತ್ತು ಅದರಲ್ಲಿ ಉಳಿಯುವ ಆಲೋಚನೆಯೇ ಅವರಿಗೆ ಘೋರ ಭಯಾನಕವಾಗಿದೆ!
ದಯವಿಟ್ಟು ತಪ್ಪಾಗಿ ಅರ್ಥಮಾಡಿಕೊಳ್ಳಬೇಡಿ; ಅವರು ಪಟ್ಟುಹಿಡಿಯುವುದರಿಂದ ಒಬ್ಬರು ರಕ್ಷಣೆ ಪಡೆಯುತ್ತಾರೆ ಎಂದು ನಾನು ಹೇಳುತ್ತಿಲ್ಲ. ಕೇವಲ ಕ್ರಿಸ್ತನಲ್ಲಿ ಮಾತ್ರ ನಂಬಿಕೆಯ ಮೂಲಕವೇ ರಕ್ಷಣೆ, ಆತನ ಕೃಪೆಯಿಂದ ಮಾತ್ರ ಎಂಬ ಬೈಬಲ್ ನ ಸತ್ಯಕ್ಕೆ ನಾನು ಸಂಪೂರ್ಣವಾಗಿ ಬದ್ಧನಾಗಿದ್ದೇನೆ [ಯೋಹಾನ 6:47; ಎಫೆ 2:8-9, ಮುಳ್ಳು 3:5]. ನಂಬಿಕೆಯಲ್ಲಿ ಛಲದಿಂದ ಒಬ್ಬನು ರಕ್ಷಿಸಲ್ಪಡುವುದಿಲ್ಲ. ನಿರಂತರ ಪರಿಶ್ರಮ ರಕ್ಷಣೆಗೆ ಕಾರಣವಲ್ಲ. ಬದಲಾಗಿ, ಇದು ನಿಜವಾದ ರಕ್ಷಣೆಯ ಫಲಿತಾಂಶವಾಗಿದೆ!
ನಾವು ನಮ್ಮ ಜೀವನವನ್ನು ಪರೀಕ್ಷಿಸೋಣ. ಪರಿಸ್ಥಿತಿಯು ಸವಾಲಿನದ್ದಾಗಿದ್ದರೂ ಸಹ, ನಾವು ಛಲದಿಂದಿರುವಂಥ ಕ್ರೈಸ್ತರೇ?
ಅಂತಿಮ ಆಲೋಚನೆಗಳು.
ಇಂದು, ಕ್ರ್ಯೆಸ್ತತ್ವವನ್ನು ಪ್ರತಿಪಾದಿಸುವ ಅನೇಕರು, “ನಾನು ಒಬ್ಬ ಕ್ರ್ಯೆಸ್ತನಾಗಿಯೂ ಮತ್ತು ಈ ಲೋಕಕ್ಕೆ ಎಷ್ಟು ಹತ್ತಿರವಾಗಬಲ್ಲೆನು?” ಎಂದು ಕೇಳುತ್ತಾರೆ. ಒಬ್ಬನು ಎಷ್ಟರಮಟ್ಟಿಗೆ ದೇವರ ಸಮಿಪಕ್ಕೆ ಬಂದರೂ ಇನ್ನೂ ಕ್ರೈಸ್ತನಾಗಿರಲಾರನು ಎಂಬುದನ್ನು ಯೇಸು ಸ್ಪಷ್ಟವಾಗಿ ತೋರಿಸುತ್ತಾನೆ. “ಹೆಚ್ಚುಕಡಿಮೆ ಒಬ್ಬ ಬಹುತೇಕ ಕ್ರೈಸ್ತ” ನಾಗಿರಲು ಸಾಧ್ಯವಿದೆ. ಅದು ಅವನಿಗೆ ಹೆಚ್ಚು ನಷ್ಟವಾಗುವುದಿಲ್ಲ!
ಆದಾಗ್ಯೂ, ಇದು ಮುಂದಿನ ಜೀವನದಲ್ಲಿ ಎಲ್ಲವನ್ನೂ ಖರ್ಚು ಮಾಡುತ್ತದೆ. ಒಬ್ಬ ನಿಜವಾದ ಕ್ರ್ಯೆಸ್ತನಿಗೂ ಮತ್ತು ಹೆಚ್ಚುಕಡಿಮೆ ಒಬ್ಬ ಕ್ರ್ಯೆಸ್ತನಿಗು ನಡುವೆ ಅಗಾಧವಾದ ವ್ಯತ್ಯಾಸವಿದೆ ಎಂಬುದನ್ನು ಕಂಡುಹಿಡಿಯುವುದು ಆ ನ್ಯಾಯತೀರ್ಪಿನ ದಿನದಂದು ಎಷ್ಟು ದುರಂತಕರವಾಗಿರುತ್ತದೆ. ಈ ವ್ಯತ್ಯಾಸವು ಸ್ವರ್ಗ ಮತ್ತು ನರಕದಷ್ಟು ವಿಶಾಲವಾಗಿದೆ.
ನಾವು ಎಚ್ಚರಿಸಲ್ಪಡೋಣ: ಬಹುತೇಕ ಉಳಿಸಲ್ಪಡುವುದು ಖಂಡಿತವಾಗಿಯೂ ಕಳೆದುಹೋಗುವುದಾಗಿದೆ! “ನರಕಕ್ಕೆ ಹೋಗುವ ದಾರಿಯು ಸದುದ್ದೇಶಗಳಿಂದ ಕೂಡಿದೆ” ಎಂಬ ಹೇಳಿಕೆ ಎಷ್ಟು ಸರಿ! ಈ ಪದಗಳು ನಮ್ಮಲ್ಲಿ ಯಾರ ವರ್ಣನೆಯೂ ಆಗದಿರಲಿ. ಮೂರ್ಖ ಕನ್ಯೆಯರು ತುಂಬಾ ತಡವಾಗಿ ಕಂಡುಕೊಂಡರು. ದಯವಿಟ್ಟು ನಿಮ್ಮನ್ನು ಇದೇ ರೀತಿಯ ಸ್ಥಾನದಲ್ಲಿ ಇರಿಸಬೇಡಿ. ನೀವು ಹಾಗೆ ಮಾಡದಿದ್ದರೆ, ನಿಮ್ಮ ಪಾಪಗಳಿಂದ ದೂರವಿರಿ, ನಿಮ್ಮನ್ನು ಕ್ಷಮಿಸುವಂತೆ ಯೇಸುವನ್ನು ಕೇಳಿಕೊಳ್ಳಿ, ಮತ್ತು ಈಗಲೇ ನಿಮ್ಮನ್ನು ಆತನ ಹಿಂಬಾಲಕರಾಗಿ ಮಾಡುತ್ತಾನೆ.
ಅವರು ತಕ್ಷಣ ಪ್ರತಿಕ್ರಿಯಿಸುತ್ತಾರೆ. ಆತನು ತನ್ನ ಪವಿತ್ರಾತ್ಮವನ್ನು ನಿಮ್ಮೊಳಗೆ ಬಂದು ಜೀವಿಸಲು ಕೊಡುವನು. ಮತ್ತು ನೀವು ನಿಮ್ಮ ಸ್ವಂತವಾಗಿ ಬದುಕಲು ಸಾಧ್ಯವಾಗದ ಜೀವನವನ್ನು ಬದುಕಲು ಪವಿತ್ರಾತ್ಮವು ನಿಮಗೆ ಸಹಾಯ ಮಾಡುತ್ತದೆ. ಮತ್ತು ನಿಮ್ಮ ಛಲದ ಜೀವನದಿಂದ, ನೀವೂ ಸಹ ಒಬ್ಬ ನಿಜವಾದ ಕ್ರೈಸ್ತರೆಂದು ಖಚಿತವಾಗಿ ಹೇಳಸಾಧ್ಯವಿದೆ!