ಒಬ್ಬ ಕ್ರೈಸ್ತನು ಆತ್ಮವಿಶ್ವಾಸದಿಂದ ಮರಣವನ್ನು ಏಕೆ ಎದುರಿಸಲು ಸಾಧ್ಯವಿದೆ ಎಂಬುದಕ್ಕೆ 3 ಕಾರಣಗಳು

Posted byKannada Editor April 23, 2024 Comments:0

(English Version: “3 Reasons Why A Christian Can Confidently Face Death”)

ಸಾರಾ ವಿಂಚೆಸ್ಟರ್ ಅವರ ಪತಿ ರೈಫಲ್ ಗಳನ್ನು ತಯಾರಿಸುವ ಮತ್ತು ಮಾರಾಟ ಮಾಡುವ ಮೂಲಕ ಸಂಪತ್ತನ್ನು ಸಂಪಾದಿಸಿದ್ದರು. 1881 ರಲ್ಲಿ ಇನ್ಫ್ಲುಯೆನ್ಸಾದಿಂದ ಮರಣ ಹೊಂದಿದ ನಂತರ, ಸಾರಾ ತನ್ನ ಮೃತ ಗಂಡನನ್ನು ಸಂಪರ್ಕಿಸಲು ಸತ್ತ ಜನರನ್ನು ಸಂಪರ್ಕಿಸುವಲ್ಲಿ ತೊಡಗಿರುವ ಮಾಟಗಾತಿಯನ್ನು ಹುಡುಕಿದಳು. ಈ ಮಾಟಗಾತಿಯ ಪ್ರಕಾರ, ಅವಳ ಮೃತ ಪತಿಯು ಅವಳಿಗೆ ಹೇಳಿದನು, “ಎಲ್ಲಿಯವರೆಗೆ ನೀನು ನಿನ್ನ ಮನೆಯನ್ನು ಕಟ್ಟುತ್ತೀಯೋ ಅಲ್ಲಿಯವರೆಗೆ ನೀನು ಸಾವನ್ನು ಎದುರಿಸಲಾರೆ.” ಆದ್ದರಿಂದ, ಮಾಟಗಾತಿಯನ್ನು ನಂಬಿ, ಸಾರಾ ಅಪೂರ್ಣವಾದ 17 ಕೋಣೆಗಳ ಬಂಗಲೆಯನ್ನು ಖರೀದಿಸಿ ಅದನ್ನು ವಿಸ್ತರಿಸಲು ಪ್ರಾರಂಭಿಸಿದಳು.

ಕಾರ್ಮಿಕರು ದಿನಕ್ಕೆ 50 ಸೆಂಟ್ಸ್ [ಒಂದು ಸಣ್ಣ ಮೊತ್ತ] ಗಳಿಸುತ್ತಿದ್ದ ಸಮಯದಲ್ಲಿ ಸುಮಾರು 5 ಮಿಲಿಯನ್ ಡಾಲರ್ ಗಳ ವೆಚ್ಚದ ಈ ಯೋಜನೆಯು, ಅವರು ತಮ್ಮ 85 ನೇ ವಯಸ್ಸಿನಲ್ಲಿ ಸಾಯುವವರೆಗೂ ಮುಂದುವರಿಯಿತು. ಅವರು ಇನ್ನೂ 80 ವರ್ಷಗಳವರೆಗೆ ಕಟ್ಟಡವನ್ನು ಉಳಿಸಿಕೊಳ್ಳಲು ಸಾಕಷ್ಟು ಸಾಮಗ್ರಿಗಳನ್ನು ಅವರು ಬಿಟ್ಟುಹೋದರು. ಇಂದು ಆ ಮನೆ ಲಕ್ಷಾಂತರ ಜನರನ್ನು ದಾಸ್ಯದಲ್ಲಿರಿಸಿರುವ ಸಾವಿನ ಭಯಕ್ಕೆ ಮೂಕ ಸಾಕ್ಷಿಯಾಗಿ ನಿಂತಿದೆ. 

ಆದಾಗ್ಯೂ, ಜನರು ಸಾವಿನ ಭಯದಿಂದ ಜೀವಿಸುವ ಅಗತ್ಯವಿಲ್ಲದಿರುವುದಕ್ಕೆ ಬೈಬಲ್ ಕಾರಣಗಳನ್ನು ಕೊಡುತ್ತದೆ. ಆದರೆ ನಾವು ಆ ಕಾರಣಗಳನ್ನು ವಿವರವಾಗಿ ನೋಡುವ ಮೊದಲು, ಒಂದು ಸರಳ ಪ್ರಶ್ನೆಯನ್ನು ಕೇಳೋಣ ಮತ್ತು ಉತ್ತರಿಸೋಣ: ಸಾವು ಎಂದರೇನು? ಸರಳ ಪದಗಳಲ್ಲಿ ಹೇಳುವುದಾದರೆ, ಸಾವು ಒಂದು ಪ್ರತ್ಯೇಕಿಸುವಿಕೆಯಾಗಿದೆ. ಅದುವೇ ಮೂಲ ಉತ್ತರ. ಈಗ, ಬೈಬಲ್ ಮೂರು ವಿಧದ ಮರಣವನ್ನು ವರ್ಣಿಸುತ್ತದೆ. 

1. ದ್ಯೆಹಿಕ ಸಾವು [ಶಾರೀರಕ]. ಈ ಸಾವು ಭೌತಿಕ ದೇಹದಿಂದ ಆತ್ಮವನ್ನು ಬೇರ್ಪಡಿಸುವುದು. ಇಬ್ರಿಯ 9:27, “ಎಲ್ಲಾ ಜನರು ಒಮ್ಮೆ ಸಾಯುವುದು, ತದನಂತರ ನ್ಯಾಯತೀರ್ಪನ್ನು ಎದುರಿಸುವದು” ಎಂದು ನಮಗೆ ಕಲಿಸುತ್ತದೆ. ಪುನರ್ಜನ್ಮವಿಲ್ಲ ಎಂದು ಬೈಬಲ್ ಸ್ಪಷ್ಟಪಡಿಸುತ್ತದೆ. ಎಲ್ಲಾ ಜನರು “ಒಮ್ಮೆ ಸಾಯುತ್ತಾರೆ” ಎಂದು ವಾಕ್ಯವು ಸ್ಪಷ್ಟವಾಗಿ ಹೇಳಿರುವುದನ್ನು ಗಮನಿಸಿರಿ. ಹಲವಾರು ಬಾರಿ ಅಲ್ಲ.

2. ಆತ್ಮಿಕ ಸಾವು. ಈ ಸಾವು ಆತ್ಮ ಮತ್ತು ದೇಹವನ್ನು ದೇವರ ಅನ್ಯೋನ್ಯತೆಯಿಂದ ಬೇರ್ಪಡಿಸುತ್ತದೆ. ಎಫೆಸ 2:1, ಯೇಸುವನ್ನು ನಂಬದ ಒಬ್ಬ ವ್ಯಕ್ತಿಯ ಸ್ಥಿತಿಯನ್ನು ನಮಗೆ ಜ್ಞಾಪಕಕ್ಕೆ ತರುತ್ತದೆ,ಆತನು ಅಪರಾಧಗಳ ಮತ್ತು ಪಾಪಗಳ ದೆಸೆಯಿಂದ ಸತ್ತವರಾಗಿದ್ದ ನಿಮ್ಮನ್ನು ಸಹ ಬದುಕಿಸಿದನು.” ನಾವೆಲ್ಲರೂ ಆತ್ಮಿಕವಾಗಿ ಸತ್ತು ಈ ಲೋಕಕ್ಕೆ ಬರುತ್ತೇವೆ. ಈ ಸ್ಥಿತಿಯು ದ್ಯೆಹಿಕ ಮರಣಕ್ಕೆ ಮತ್ತು ಅಂತಿಮವಾಗಿ ನಿತ್ಯ ಮರಣಕ್ಕೆ ಎಡೆಮಾಡಿಕೊಡುತ್ತದೆ—ಯೇಸುಕ್ರಿಸ್ತನು  ಅವರಿಗೆ ಕೊಡುವ ನಿತ್ಯ ಜೀವವನ್ನು ಒಪ್ಪಿಕೊಳ್ಳದೆ ಒಬ್ಬನು ಸಾಯಬೇಕೆ.

3. ಶಾಶ್ವತ ಸಾವು. ಈ ಸಾವು ಭೂಮಿಯ ಮೇಲೆ ಜೀವಂತವಾಗಿರುವಾಗ ಯೇಸುವನ್ನು ತಿರಸ್ಕರಿಸುವುದರಿಂದ ಆತ್ಮ ಮತ್ತು ದೇಹಗಳೆರಡನ್ನೂ ದೇವರಿಂದ ಶಾಶ್ವತವಾಗಿ ಬೇರ್ಪಡಿಸುತ್ತದೆ. ಪ್ರಕಟನೆ 20:15 ಅಂತಹ ಜನರ ಅಂತಿಮ ಸ್ಥಳವನ್ನು ಕುರಿತು ನಮಗೆ ಕಲಿಸುತ್ತದೆ, “ಯಾರ ಹೆಸರನ್ನು ಜೀವಬಾಧ್ಯರ ಪುಸ್ತಕದಲ್ಲಿ ಬರೆಯಲಾಗಿಲ್ಲವೋ ಅವನು ಬೆಂಕಿಯ ಕೆರೆಗೆ ಎಸೆಯಲ್ಪಡುವನು.” ಈ ಸಾವನ್ನು ಅನುಭವಿಸುವವರು ಶಾಶ್ವತವಾಗಿ ನರಕದಲ್ಲಿ ವಾಸಿಸುತ್ತಾರೆ.  

ಮರಣದ ಕುರಿತಾದ ಆ ಅತ್ಯಾವಶ್ಯಕ ತಿಳುವಳಿಕೆಯೊಂದಿಗೆ, ಕ್ರೈಸ್ತರು ಏಕೆ ಆತ್ಮವಿಶ್ವಾಸದಿಂದ ಮರಣವನ್ನು ಎದುರಿಸಲು ಸಾಧ್ಯವಿದೆ ಎಂಬುದಕ್ಕೆ 3 ಕಾರಣಗಳನ್ನು ನೋಡೋಣ.

ಕಾರಣ # 1. ಮರಣವು ಕ್ರಿಶ್ಚಿಯನ್ನರ ಮೇಲೆ ಯಾವುದೇ ಅಧಿಕಾರವನ್ನು ಹೊಂದಿಲ್ಲ.

ಕರ್ತನಾದ ಯೇಸು ಕ್ರಿಸ್ತನು ಈ  ಭೂಮಿಗೆ ಬಂದಾಗ, ಒಬ್ಬ ಸಾಮಾನ್ಯ ಮನುಷ್ಯನಾಗಿ ಮಾನವ ಶರೀರವನ್ನು ತೆಗೆದುಕೊಂಡನು, ಪರಿಪೂರ್ಣ ಜೀವನವನ್ನು ನಡೆಸಿದನು ಮತ್ತು ಪಾಪಗಳ ಶಿಕ್ಷೆಗೆ ನಮ್ಮ ಬದಲಿಯಾಗಿ ಮರಣಹೊಂದಿದನು ಮತ್ತು ಮತ್ತೆ ಮೂರನೆ ದಿನ ಎದ್ದನು. ತತ್ಪರಿಣಾಮವಾಗಿ, ತಮ್ಮ ಪಾಪಗಳ ಕ್ಷಮಾಪಣೆಗಾಗಿ ಯೇಸುವಿನಲ್ಲಿ ಭರವಸೆಯಿಡುವವರು, ಭವಿಷ್ಯದಲ್ಲಿ ತಾವು ಯಾವ ಶಿಕ್ಷೆಯನ್ನು ಎದುರಿಸುವುದಿಲ್ಲವೆಂಬ ಭರವಸೆಯನ್ನು ಹೊಂದಿರಸಾಧ್ಯವಿದೆ. ಅವರು ಎಂದಿಗೂ ಶಾಶ್ವತ ಸಾವನ್ನು ಅನುಭವಿಸುವುದಿಲ್ಲ. ಅಷ್ಟೇ ಅಲ್ಲ, ಈಗಲೂ ಸಹ, ಅವರು ಸಾವಿನ ಭಯದಿಂದ ಜೀವಿಸುವ ಅಗತ್ಯವಿಲ್ಲ, ಏಕೆಂದರೆ ಯೇಸು “ತಮ್ಮ ಜೀವಮಾನವಿಡೀ ಪಾಪಸ ದಾಸತ್ವದಲ್ಲಿ  ಸಿಲುಕಿದ್ದವರನ್ನು ತಮ್ಮ ಮರಣದ ಭಯದಿಂದ ಬಿಡುಗಡೆಮಾಡುತ್ತಾನೆ” [ಇಬ್ರಿಯ 2:15].  

ನೀವು ನೋಡಿ, ದ್ಯೆಹಿಕ ಮರಣವು ಮುಂದಿನ ಜನ್ಮದ ಒಂದು ಭಾಗವಾಗಿದೆ — ವಿಶ್ವಾಸಿಗಳಿಗೆ ದೇವರ ಸನ್ನಿಧಿಯಲ್ಲಿ ಶಾಶ್ವತವಾದ ನಿತ್ಯ ಜೀವನ. ಇದು ನಿದ್ರೆ ಮಾಡಿ ಎಚ್ಚರವಾದಂತೆ. ದೇವರ ವಾಕ್ಯದಲ್ಲಿ  ಕ್ರೈಸ್ತನಾಗಿ  ಮರಣಹೊಂದುವವರನ್ನು “ನಿದ್ರಿಸುತ್ತಾನೆ” ಎಂದು ವರ್ಣಿಸುವುದರಲ್ಲಿ ಆಶ್ಚರ್ಯವೇನಿಲ್ಲ [1 ಕೊರಿ 15:51; 1 ಥೆಸ್ 4:13]. ಮರಣವು ನಿಜವಾಗಿಯೂ ಕ್ರೈಸ್ತನ ಮೇಲೆ ಯಾವುದೇ ಅಧಿಕಾರವನ್ನು ಹೊಂದಿಲ್ಲ, ಮತ್ತು ನಾವು ಮರಣವನ್ನು ಧೈರ್ಯದಿಂದ ಏಕೆ ಎದುರಿಸಬಹುದು ಎಂಬುದಕ್ಕೆ ಇದೇ ಮೊದಲ ಕಾರಣವಾಗಿದೆ. 

ಕಾರಣ # 2. ಮರಣವು ಕ್ರೈಸ್ತನನ್ನು ತಕ್ಷಣವೇ ಕರ್ತನ ಸನ್ನಿಧಿಯಲ್ಲಿರಲು ಶಕ್ತಗೊಳಿಸುತ್ತದೆ.

ಒಬ್ಬನು ಕ್ರ್ಯೆಸ್ತನಾಗಿ ಸತ್ತಾಗ, ಆತನ ದೇಹವು ಸಮಾಧಿಯೊಳಗೆ ಹೋಗುತ್ತದೆ. ಆದಾಗ್ಯೂ, ಆತ್ಮವು ತಕ್ಷಣವೇ ದೇವರ ಸನ್ನಿಧಿಗೆ ಹೋಗುತ್ತದೆ. ಪೌಲನು ತಾನು “ಶರೀರದಿಂದ ದೂರವಾಗಿಯೂ ಕರ್ತನ ಸಂಗಡ ಮನೆಯಲ್ಲಿಯೂ ಇರುವೆನು” ಎಂದು ಹೇಳಿದನು[2 ಕೊರಿಂಥ 5:8]. ಇದನ್ನು ಆಲೋಚಿಸಿ ನಾವು ಧೈರ್ಯವುಳ್ಳವರಾಗಿದ್ದು ದೇಹವನ್ನು ಬಿಟ್ಟು ಕರ್ತನ ಬಳಿಯಲ್ಲಿರುವದೇ ಉತ್ತಮವೆಂದು ಎಣಿಸುತ್ತೇವೆ. ಇದು ನಮ್ಮ ಆತ್ಮವು ದೇವರ ಬಳಿಯಲ್ಲಿರುತ್ತದೆ ಎಂದು ತೋರಿಸುತ್ತದೆ.

ಶಿಲುಬೆಯ ಮೇಲೆ, ಪಶ್ಚಾತ್ತಾಪಪಟ್ಟ ಅಪರಾಧಿಗಳಲ್ಲಿ ಒಬ್ಬನಿಗೆ ಯೇಸುಕ್ರಿಸ್ತನು ವಾಗ್ದಾನ ಮಾಡಿದನು, “ಇಂದು ನೀನು ಪರದೈಸಿನಲ್ಲಿ ನನ್ನೊಂದಿಗೆ ಇರುವೆನೆಂದು ನಾನು ನಿಜವಾಗಿಯೂ ನಿನಗೆ ಹೇಳುತ್ತೇನೆ” [ಲೂಕ 23:43]. ದೇವರ ಸನ್ನಿಧಿಯಲ್ಲಿರಬೇಕೆಂಬ ವಾಗ್ದಾನವು, ಮರಣಹೊಂದಿದ ಮೇಲೆ ಸ್ವಲ್ಪ ಸಮಯದಿಂದ ಕೆಲವು ದಿನಗಳ ನಂತರವೂ ಅಲ್ಲದೆ, ಅಥವಾ ದೂರದ ಭವಿಷ್ಯತ್ತಿಗೆ ಒಂದು ವಾಸ್ತವಿಕ ಸಂಗತಿಯಾಗಿರಲಿಲ್ಲ, ಆದರೆ ದೇವರೊಂದಿಗೆ ತತ್ ಕ್ಷಣದ ಉಪಸ್ಥಿತಿಯನ್ನು ಸೂಚಿಸುವ “ಇಂದು ಇವತ್ತು” ಆಗಿತ್ತು. ಒಬ್ಬನು  ಕ್ರೈಸ್ತನಾಗಿ ಸತ್ತಮೇಲೆ ಅವನ ಆತ್ಮವು ಕರ್ತನ ಹತ್ತಿರೆ ನೇರವಾಗಿ ಹೋಗುತ್ತದೆ ಹೊರತು   ಮುಂಚಿತವಾಗಿ ಕಾಯುವ ಅವಧಿಯಾಗಲೀ, ತಾತ್ಕಾಲಿಕ ನಿಂತುಕೊಳ್ಳುವ ಸ್ಥಳವಾಗಲೀ ಇಲ್ಲ. ಇದು ದೈಹಿಕ ಮರಣದ ನಂತರ ತಕ್ಷಣವೇ ಸಂಭವಿಸುತ್ತದೆ. ಇದಕ್ಕೆ ಇರುವ ಏಕೈಕ ವಿನಾಯಿತಿ, ಯೇಸು ಹಿಂದಿರುಗಿದಾಗ, ಆತನನ್ನು ನಂಬಿದವರು ಶಾರೀರಿಕ ಮರಣವನ್ನು ಅನುಭವಿಸದೆ ತತ್ ಕ್ಷಣವೇ ಆತನೊಂದಿಗೆ ಇರುತ್ತಾರೆ [1 ಥೆಸ್ 4:16-17]. ಕ್ರೈಸ್ತರು ಆತ್ಮವಿಶ್ವಾಸದಿಂದ ಸಾವನ್ನು ಎದುರಿಸಲು ಇದು ಎರಡನೆಯ ಕಾರಣವಾಗಿದೆ.

ಕಾರಣ # 3. ಮರಣವು ಕ್ರೈಸ್ತನಿಗೆ ಒಂದು ಹೊಸ ಮತ್ತು ಪರಿಪೂರ್ಣವಾದ ದೇಹವನ್ನು ಹೊಂದಲು ಶಕ್ತಗೊಳಿಸುತ್ತದೆ.

ನಾವು ಈ ಪ್ರಪಂಚಕ್ಕೆ ದ್ಯೆಹಿಕ ದೇಹದೊಂದಿಗೆ ಬಂದಿದ್ದೇವೆ, ಈ ದೇಹವು ಪಾಪ ಮತ್ತು ಅನಾರೋಗ್ಯಕ್ಕೆ ಒಳಪಟ್ಟಿರುತ್ತದೆ. ಆದ್ದರಿಂದಲೇ ದ್ಯೆಹಿಕವಾದ ಸಾವು ಸಂಭವಿಸುತ್ತದೆ. ಆದಾಗ್ಯೂ, ಯೇಸು ಕ್ರಿಸ್ತನು ತನ್ನ ಜನರಿಗಾಗಿ ಭವಿಷ್ಯದಲ್ಲಿ ಹಿಂದಿರುಗಿದಾಗ, ಎಲ್ಲಾ ಕ್ರೈಸ್ತರು ಪರಿಪೂರ್ಣ ಮತ್ತು ಹೊಸ ದೇಹಗಳನ್ನು—ಪಾಪ-ಮುಕ್ತ ಮತ್ತು ರೋಗರಹಿತ ದೇಹಗಳನ್ನು—ಪಡೆಯುವರು. ಮರಣಹೊಂದಿದ ಮತ್ತು ಯಾರ ಆತ್ಮಗಳು ಕರ್ತನ ಸನ್ನಿಧಿಯಲ್ಲಿರಲು ಹೋದವೋ ಆ ಕ್ರೈಸ್ತರು ಸಹ ಆ ಸಮಯದಲ್ಲಿ ಹೊಸ ದೇಹಗಳನ್ನು ಪಡೆಯುವರು. ಈ ಘಟನೆಯನ್ನು ದೇವರವಾಕ್ಯದಲ್ಲಿ  “ಮಹಿಮೆ ಅಥವಾ ವ್ಯೆಭವ” ಎಂದು ಕರೆಯುತ್ತದೆ. 1 ಕೊರಿಂಥ 15:51-52 ಈ ಪ್ರಕ್ರಿಯೆಯನ್ನು ವಿವರಿಸುತ್ತದೆ,ಕೇಳಿರಿ, ಇದುವರೆಗೆ ಗುಪ್ತವಾಗಿದ್ದ ಸಂಗತಿಯನ್ನು ನಿಮಗೆ ತಿಳಿಸುತ್ತೇನೆ: ನಾವೆಲ್ಲರೂ ನಿದ್ರೆ ಹೋಗುವದಿಲ್ಲಆದರೆ ಕಡೇ ತುತೂರಿಯ ಧ್ವನಿಯಾಗುವಾಗ ನಾವೆಲ್ಲರು ಒಂದು ಕ್ಷಣದಲ್ಲೇ ರೆಪ್ಪೆ ಬಡಿಯುವಷ್ಟರೊಳಗಾಗಿ ಮಾರ್ಪಡುವೆವು. ತುತೂರಿಯು ಊದಲಾಗಿ ಸತ್ತವರು ನಿರ್ಲಯರಾಗಿ ಎಬ್ಬಿಸಲ್ಪಡುವರು, ನಾವು ಮಾರ್ಪಡುವೆವು.”

1 ಕೊರಿಂಥ 15:42-44, ಭವಿಷ್ಯದಲ್ಲಿ ನಾವು ಪಡೆಯುವ ಈ ಹೊಸ ಶರೀರದ ಕುರಿತು ಹೆಚ್ಚಿನ ವಿವರಗಳನ್ನು ಕೊಡುತ್ತದೆ, “42 ಸತ್ತವರ ಪುನರುತ್ಥಾನದ ವಿಷಯದಲ್ಲೂ ಹಾಗೆಯೇ ಇರುತ್ತದೆ. ದೇಹವು ಲಯಾವಸ್ಥೆಯಲ್ಲಿ ಬಿತ್ತಲ್ಪಡುತ್ತದೆ, ನಿರ್ಲಯಾವಸ್ಥೆಯಲ್ಲಿ ಎದ್ದುಬರುವದು; 43 ಹೀನಾವಸ್ಥೆಯಲ್ಲಿ ಬಿತ್ತಲ್ಪಡುತ್ತದೆ, ಮಹಿಮೆಯಲ್ಲಿ ಎದ್ದು ಬರುವದು; ನಿರ್ಬಲಾವಸ್ಥೆಯಲ್ಲಿ ಬಿತ್ತಲ್ಪಡುತ್ತದೆ, ಬಲಾವಸ್ಥೆಯಲ್ಲಿ ಎದ್ದು ಬರುವದು; 44 ಪ್ರಾಕೃತ ದೇಹವಾಗಿ ಬಿತ್ತಲ್ಪಡುತ್ತದೆ, ಆತ್ಮಿಕದೇಹವಾಗಿ ಎದ್ದು ಬರುವದು.” ಈ ಹೊಸ ಆತ್ಮಿಕ ದೇಹವನ್ನು ಪುನರುತ್ಥಾನ ದೇಹ, ಲಯವಿಲ್ಲದ ಅಥವಾ ಭವ್ಯವಾದ ದೇಹ ಎಂದೂ ಕರೆಯಲಾಗುತ್ತದೆ. ಆದುದರಿಂದಲೇ ನಾವು ಕ್ರೈಸ್ತರು “ನಮ್ಮ ಶರೀರದ ವಿಮೋಚನೆ” ಗಾಗಿ ಕಾತುರದಿಂದ ಕಾಯುತ್ತಿದ್ದೇವೆ [ರೋಮ 8:23]. ಕ್ರೈಸ್ತರು ಆತ್ಮವಿಶ್ವಾಸದಿಂದ ಸಾವನ್ನು ಎದುರಿಸಲು ಇದು ಮೂರನೆಯ ಕಾರಣವಾಗಿದೆ.

ಆದುದರಿಂದ, ವಿಶ್ವಾಸಿಗಳು ಮರಣವನ್ನು ಧೈರ್ಯದಿಂದ ಏಕೆ ಎದುರಿಸಲು ಸಾಧ್ಯವಿದೆ ಎಂಬುದರ ಕುರಿತು 3 ಘನ ಕಾರಣಗಳು, 3 ಮಹತ್ತರವಾದ ವಾಸ್ತವತೆಗಳು. ಮೊದಲನೆಯದಾಗಿ, ಸಾವಿಗೆ ನಮ್ಮ ಮೇಲೆ ಯಾವುದೇ ಅಧಿಕಾರವಿಲ್ಲ; ಎರಡನೆಯದಾಗಿ, ಮರಣವು ತತ್ ಕ್ಷಣವೇ ಕರ್ತನ ಸನ್ನಿಧಿಯಲ್ಲಿರಲು ನಮ್ಮನ್ನು ಶಕ್ತಗೊಳಿಸುತ್ತದೆ, ಮತ್ತು ಅಂತಿಮವಾಗಿ, ಮರಣವು ಹೊಸ ಮತ್ತು ಪರಿಪೂರ್ಣ ದೇಹವನ್ನು ಹೊಂದಲು ನಮಗೆ ಸಹಾಯಮಾಡುತ್ತದೆ.

ಈ ಮಹೋನ್ನತ ವಾಸ್ತವತೆಗಳು, ಕ್ರೈಸ್ತನಾಗಿ ಸಾವನ್ನು ಧೈರ್ಯದಿಂದ ಎದುರಿಸುವಂತೆ ಶಕ್ತಗೊಳಿಸಬೇಕು. ಆದರೂ, ಕೆಲವೊಮ್ಮೆ, “ನನಗೆ ಏನಾಗುತ್ತದೆ? ನಾನು ಅಶಕ್ತನಾಗುತ್ತೇನೆಯೇ? ನಾನು ನೋವನ್ನು ಅನುಭವಿಸುತ್ತೇನೋ?” ಎಂದು ಕ್ರೈಸ್ತರು ಹಿಡಿದುಕೊಳ್ಳುತ್ತಾರೆ, ವಿಶೇಷವಾಗಿ ಅವರು ವಯಸ್ಸಾದಂತೆ ಅಥವಾ ಗಂಭೀರ ಕಾಯಿಲೆಯನ್ನು ಎದುರಿಸುತ್ತಿರುವಾಗಲೂ ಸಹ. ಇವು ಬಹಳ ನ್ಯಾಯಸಮ್ಮತವಾದ ಕಾಳಜಿಗಳಾಗಿದ್ದರೂ, ನಾವು ಇನ್ನೂ ದೇವರ ವಾಗ್ದಾನಗಳು ಮತ್ತು ರಕ್ಷಣೆಯನ್ನು ನೋಡಬೇಕಾಗಿದೆ ಮತ್ತು ಆ ಮೂಲಕ ದೇವರ ವಾಕ್ಯದ ರೀತಿಯಲ್ಲಿ ಪ್ರತಿಕ್ರಿಯಿಸಬೇಕಾಗಿದೆ. ದೇವರು ವಾಗ್ದಾನ ಮಾಡಿದ್ದಾನೆ,ನಿಮ್ಮ ಮುಪ್ಪಿನ ತನಕ ನಾನೇ ಆಧಾರ, ನರೆಬಂದಾಗಲೂ ನಿಮ್ಮನ್ನು ಹೊತ್ತು ಸಹಿಸುವೆನು; ನಾನೇ ಉಂಟುಮಾಡಿದೆನು, ನಾನೇ ಹೊರುವೆನು, ಹೌದು, ನಿಮ್ಮನ್ನು ಹೊತ್ತು ಸಹಿಸಿ ನಿರ್ವಹಿಸುವೆನು.” [ಯೆಶಾಯ 46:4].

ಮತ್ತು ನಾವು ಶಾರೀರಿಕ ಯಾತನೆಯನ್ನು ಅನುಭವಿಸಬೇಕಾಗಿರುವುದು ದೇವರ ಚಿತ್ತವಾಗಿದ್ದರೆ, ನಮ್ಮ ತಂದೆಯ ಚಿತ್ತವು ನಮಗೆ ಅತ್ಯುತ್ತಮವಾಗಿದೆ ಎಂಬುದನ್ನು ತಿಳಿದುಕೊಂಡು, ನಾವು ಇನ್ನೂ ಶಾಂತವಾಗಿ ಮತ್ತು ನಿರ್ಭೀತರಾಗಿರಲು ಸಾಧ್ಯವಿದೆ. ಆತನು ನಮ್ಮನ್ನು ಈ ಲೌಕಿಕ ಯಾತ್ರೆಯ ಮೂಲಕ ಪರಲೋಕದಲ್ಲಿರುವ ನಮ್ಮ ಅಂತಿಮ ಮನೆಗೆ ಒಯ್ಯುವನು [ಫಿಲಿ 1:6]. ದಿನ ಕಳೆದಂತೆ, ನಾವು ದೇವರೊಂದಿಗೆಇರಲು ಹತ್ತಿರವಾಗಿದ್ದೇವೆ. ಕತ್ತಲೆಯ ಸಮಯಗಳಲ್ಲಿ ನಂಬಿಗಸ್ತಿಕೆಯಿಂದ ಪಟ್ಟುಹಿಡಿಯಲು ಅದು ನಮಗೆ ಸಹಾಯಮಾಡಬೇಕು!

ಇವು ಕ್ರ್ಯೆಸ್ತರಿಗೆ ದೊಡ್ಡ ವಾಸ್ತವಗಳಾಗಿದ್ದರೂ, ಒಬ್ಬನು ಯೇಸುವನ್ನು ನಂಬದಿದ್ದರೆ ಅವನ ಭವಿಷ್ಯವು ತುಂಬಾ ಕರಾಳವಾಗಿರುತ್ತದೆ. ಅವಿಶ್ವಾಸಿಯು ಸತ್ತಾಗ, ದೇಹವು ಸಮಾಧಿಯೊಳಗೆ ಹೋಗುತ್ತದೆ ಎಂದು ಬೈಬಲ್ ಹೇಳುತ್ತದೆ, ಆದರೆ ಆತ್ಮವು ಹೇಡೀಸ್ [ನರಕಕ್ಕೆ] ಹೋಗುತ್ತದೆ, ಅದು ದುಃಖದ ಸ್ಥಳವಾಗಿದೆ [ಲೂಕ 16:23]. ಅಲ್ಲಿಯೇ ಅವಿಶ್ವಾಸಿಗಳ ಆತ್ಮಗಳು ಅಂತಿಮ ನ್ಯಾಯತೀರ್ಪಿನ ದಿನದವರೆಗೂ ಉಳಿಯುತ್ತವೆ, ಆಗ ಅವರು ನರಕಕ್ಕೆ ತಳ್ಳಲ್ಪಡುವ ಮೊದಲು, ಪಾಪಗಳಿಗಾಗಿ ಅಂತಿಮ ತೀರ್ಪಿಗಾಗಿ ದೇವರ ಮುಂದೆ ನಿಲ್ಲುವಂತೆ ಬೆಳೆಸಲ್ಪಡುವರು. ಪ್ರಕಟನೆ 20:13, ಎಲ್ಲ ಅವಿಶ್ವಾಸಿಗಳು “ತಾವು ಮಾಡಿದ ಕಾರ್ಯಕ್ಕನುಸಾರವಾಗಿ” ನ್ಯಾಯವಿಚಾರಣೆ ನಿರ್ಣಯಿಸಲ್ಪಡುವರು ಎಂದು ಹೇಳುತ್ತದೆ. ಮತ್ತು ಅವರ ಕ್ಷಮಿಸಲಾಗದ ಪಾಪಗಳ ಕಾರಣದಿಂದಾಗಿ, ನಂತರ ಅವರು “ಬೆಂಕಿಯ ಕೆರೆಗೆ [ನರಕ] ಎಸೆಯಲ್ಪಡುವರು”[ಪ್ರಕಟನೆ 20:14]. ನಿಜವಾಗಿಯೂ, ಒಂದು ಭಯಾನಕ ಮತ್ತು ದುರಂತ ಅಂತ್ಯ!

ಆದಾಗ್ಯೂ, ಜೀವನವು ಆ ರೀತಿಯಲ್ಲಿ ಕೊನೆಗೊಳ್ಳಬೇಕಾಗಿಲ್ಲ. ಪಾಪಗಳಿಂದ ದೂರ ಸರಿಯುವ ಮೂಲಕ ಮತ್ತು ಯೇಸುವಿನಲ್ಲಿ ಭರವಸೆಯಿಡುವ ಮೂಲಕ, ಒಬ್ಬನು ಆತ್ಮಿಕ ಜನನವನ್ನು ಅನುಭವಿಸಸಾಧ್ಯವಿದೆ ಮತ್ತು ಈ ಭಯಾನಕ ನ್ಯಾಯತೀರ್ಪನ್ನು ತಪ್ಪಿಸಸಾಧ್ಯವಿದೆ ಏಕೆಂದರೆ ಯೇಸು ಪಾಪಕ್ಕಾಗಿ ದೇವರ ನ್ಯಾಯತೀರ್ಪನ್ನು ತೆಗೆದುಕೊಂಡನು. ಯೇಸು ಸ್ವತಃ ಯೋಹಾನ 5:24ರಲ್ಲಿ ವಾಗ್ದಾನ ಮಾಡಿದನು, “ನನ್ನ ವಾಕ್ಯವನ್ನು ಕೇಳಿ ನನ್ನನ್ನು ಕಳುಹಿಸಿದವನನ್ನು ನಂಬುವವನು ನಿತ್ಯಜೀವವನ್ನು ಹೊಂದಿರುತ್ತಾನೆ ಮತ್ತು ನ್ಯಾಯತೀರ್ಪಿಗೆ ಒಳಗಾಗುವುದಿಲ್ಲ ಆದರೆ ಮರಣದಿಂದ ನಿತ್ಯ ಜೀವಕ್ಕೆ ದಾಟುತ್ತಾನೆಂದು ನಾನು ನಿಮಗೆ ನಿಜವಾಗಿಯೂ ಹೇಳುತ್ತೇನೆ.” ಈ ವಚನವು ಕ್ರಿಸ್ತನಲ್ಲಿ ನಂಬಿಕೆಯಿಡುವವರಿಗಾಗಿ 3 ವಾಗ್ದಾನಗಳನ್ನು ಹೊಂದಿದೆ:

(1) ಅವರಿಗೆ ಈಗ ನಿತ್ಯಜೀವವಿದೆ.

(2) ಅವರು ತಮ್ಮ ಪಾಪಗಳಿಗಾಗಿ ಭವಿಷ್ಯದಲ್ಲಿ ನ್ಯಾಯತೀರ್ಪನ್ನು ಎದುರಿಸುವದಿಲ್ಲ. 

(3) ಅವರು ಆತ್ಮಿಕ ಮರಣದಿಂದ ನಿತ್ಯಜೀವಕ್ಕೆ ದಾಟಿದ್ದಾರೆ, ಅವರು ಶಾಶ್ವತ ಮರಣದಿಂದ ತಪ್ಪಿಸಿದ್ದಾರೆ. 

ಇವು ಅಸಾಧಾರಣ ಭರವಸೆಗಳಾಗಿವೆ, ನಂಬಿದರೆ, ಅದು ಒಬ್ಬ ವ್ಯಕ್ತಿಯನ್ನು ಸಾವಿನ ಭಯದಿಂದ ಮುಕ್ತಗೊಳಿಸುತ್ತದೆ. ಹೌದು, ಸಾವಿನೊಂದಿಗಿನ ನಮ್ಮ ಭೇಟಿ ಅನಿವಾರ್ಯವಾಗಿದೆ. ಯಾವುದೇ ವೈದ್ಯಕೀಯ ಯೋಜನೆಯು ಸಾವನ್ನು ಜಯಿಸಲು ಸಾಧ್ಯವಿಲ್ಲ! ಇಬ್ರಿಯ 9:27 ಸ್ಪಷ್ಟವಾಗಿ ಹೀಗೆ ಹೇಳುತ್ತದೆ, “ಜನರು ಒಮ್ಮೆ ಸಾಯುವರು, ತದನಂತರ ನ್ಯಾಯತೀರ್ಪನ್ನು ಎದುರಿಸುವರು.” ಮರಣವು ಎಲ್ಲರೂ ಇಟ್ಟುಕೊಳ್ಳಬೇಕಾದ ಒಂದು ಅಪಾಯಿಂಟ್ಮೆಂಟ್ [ನೇಮಕಾತಿ] ಆಗಿದೆ! ಪ್ರತಿ ಗಂಟೆಗೆ ಸುಮಾರು 10,000 ಜನರು ಸಾಯುತ್ತಾರೆ. ಶೀಘ್ರದಲ್ಲೇ ಅಥವಾ ನಂತರ, ನೀವು ಆ ಸಂಖ್ಯೆಯಲ್ಲಿರುತ್ತೀರಿ.

ನೀವು ಸಾವಿಗೆ ಸಿದ್ಧರಿದ್ದೀರಾ? ಖಂಡಿತವಾಗಿಯೂ, ನೀವು ಕ್ರೈಸ್ತರಾಗಿದ್ದಲ್ಲಿ—ನೀವು ಹಾಗೆ ಮಾಡಬಲ್ಲಿರಿ! ಏಕೆಂದರೆ ಒಬ್ಬ ಕ್ರೈಸ್ತನು ಮಾತ್ರ ನಿಶ್ಚಯವಾಗಿಯೂ ಸಂತೋಷದಿಂದಯೂ ಹಾಡಬಲ್ಲನು, “55ಮರಣವೇ, ನಿನ್ನ ಜಯವೆಲ್ಲಿ? ಮರಣವೇ, ನಿನ್ನ ವಿಷದ ಕೊಂಡಿ ಎಲ್ಲಿ? 57ಆದರೆ ದೇವರು ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕ ನಮಗೆ ಜಯವನ್ನು ಕೊಟ್ಟಿದ್ದಾನೆ; ಆತನಿಗೆ ಸ್ತೋತ್ರ” [1 ಕೊರಿಂಥ 15:55, 57].

Category

Leave a Comment